ಬೆಂಗಳೂರು : ಸಿಎಂ ಸಿದ್ದರಾಮಯ್ಯಗೆ ಇವಿಎಂಗಳ ಮೇಲೆ ನಂಬಿಕೆ ಇಲ್ಲದಿದರೆ ರಾಜೀನಾಮೆ ಕೊಟ್ಟು ಸರಿಯಿಲ್ಲ ಎಂದು ಹೇಳಲಿ ಎಂದು ಸಂಸದ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತಾಡಿದ ಬೊಮ್ಮಾಯಿ, ಬ್ಯಾಲೆಟ್ ಪೇಪರ್‌ಗಳಲ್ಲಿ ಅಕ್ರಮ, ಗೊಂದಲ ಬಹಳ ಆಗುತಿದ್ದ ಹಿನ್ನಲೆ ಇದನ್ನು ತಪ್ಪಿಸಲು ಇವಿಎಂಗಳನ್ನು ಜಾರಿಗೆ ತರಲಾಯಿತು. 2004, 2009ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಇವಿಎಂಗೆ ತಕರಾರು ಇರಲಿಲ್ಲ. ಸಿದ್ದರಾಮಯ್ಯ ಗೆದ್ದಿದ್ದೇ ಇವಿಎಂನಿಂದ. ಇವರು ಗೆಲ್ಲುವುದಕ್ಕೆ ಇವಿಎಂ ಬೇಕಾಗಿತ್ತು ಎಂದಿದ್ದಾರೆ.
ಇವಿಎಂಗಳಲ್ಲಿ ಗೊಂದಲ, ದೋಷ ಇದ್ದರೆ ಬಂದು ತೋರಿಸಿ, ದಾಖಲೆ ಕೊಡಿ ಎಂದರೆ ಯಾರೂ ಬರಲಿಲ್ಲ. ಈಗ ಇವಿಎಂಗಳ ಬದಲು ಬ್ಯಾಲೆಟ್ ಪೇಪರ್‌ಗಳನ್ನು ಅನುಭವದ ಮೇಲೆ ತರುತ್ತಿದ್ದೇವೆ ಎಂದು ಸಿಎಂ ಹೇಳಿದ್ದಾರೆಂದು ಕಿಡಿಕಾರಿದ್ದಾರೆ.