ಐದು ವರ್ಷ ಸಿದ್ದರಾಮಯ್ಯನವರೆ ಸಿಎಂ ಆಗಿರುತ್ತಾರೆ ಎಂದು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಹೇಳಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದುವರಿಯುವ ಕುರಿತು ಗೊಂದಲಗಳಿಲ್ಲ. ಕೆಲವು ಶಾಸಕರು ತಮ್ಮ ಅಭಿಪ್ರಾಯ ಹೇಳಿದ್ದಾರೆ. 138 ಶಾಸಕರು ಇರುವ ಪಕ್ಷದಲ್ಲಿ ಇಂತಹ ಗೊಂದಲಗಳು ಸಹಜ. ಸಿಎಂ ಬದಲಾವಣೆಯ ಬಗ್ಗೆ ಹೈಕಮಾಂಡ್ ಎಲ್ಲಿಯೂ ಹೇಳಿಲ್ಲ. ಇಕ್ಬಾಲ್ ಹುಸೇನರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬಾರದು. ಅದೇ ರೀತಿ ಬಿ.ಆರ್ ಪಾಟೀಲ ತಮ್ಮ ಕ್ಷೇತ್ರದ ಅನುದಾನ ಕೇಳಿದ್ದಾರೆ. ರಾಜ್ಯದಲ್ಲಿ ಸಿಎಂ ಎಲ್ಲ ಶಾಸಕರಿಗೂ ಸಮಾನ ಅನುದಾನ ನೀಡಿದ್ದಾರೆ ಎಂದಿದ್ದಾರೆ.