ಬೆಂಗಳೂರು: ಸಿದ್ದರಾಮಯ್ಯ (Siddaramaiah) ಲಾಟರಿ ಹೊಡೆದು ಬಿಟ್ಟ, ಅವನ ಗ್ರಹಚಾರ ಚೆನ್ನಾಗಿತ್ತು. ಹೀಗಾಗಿ ಸಿಎಂ ಆದ ಎಂದು ಹಿರಿಯ ಶಾಸಕ ಬಿ.ಆರ್ ಪಾಟೀಲ್ (BR Patil) ಹೇಳಿರುವ ವಿಡಿಯೋವೊಂದು ಇದೀಗ ಸಂಚಲನ ಮೂಡಿಸಿದೆ.
ವಸತಿ ನಿಗಮದಲ್ಲಿ `ಮನಿ ಇದ್ರೆ ಮನೆ’ ಎಂಬ ಆಡಿಯೋ ವಿವಾದದ ನಂತರ ಈಗ ಮತ್ತೊಂದು ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ, ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ. ಸಿಎಂಗೆ ಸೋನಿಯಾ ಗಾಂಧಿಯನ್ನು ಮೊದಲು ಭೇಟಿ ಮಾಡಿಸಿದವನೇ ನಾನೇ. ಆದರೆ ಅವನ ಗ್ರಹಚಾರ ಚೆನ್ನಾಗಿತ್ತು. ಅವನು ಸಿಎಂ ಆಗಿಬಿಟ್ಟ. ನನಗೆ ಗಾಡು ಇಲ್ಲ, ಫಾದರು ಇಲ್ಲ ಎಂದು ಬೇಜಾರ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.