ಶಿವಮೊಗ್ಗ : ಶಾಂತಿಯನ್ನು ಕದಡುವ ಕೆಲಸವನ್ನು ಕೆಲವು ಮುಸ್ಲೀಂ ಗೂಂಡಾಗಳು ಮಾಡುತ್ತಿದ್ದಾರೆ. ಅನಧಿಕೃತವಾಗಿ ಮನೆ ನಿರ್ಮಾಣ ಮಾಡುತ್ತಿದ್ದ ಮುಸ್ಲೀಂ ಗೂಂಡಾಗಳು ಈಗ ದೇವರ ಮೂರ್ತಿಯನ್ನು ಚರಂಡಿಗೆ ಹಾಕಿದ್ದಾರೆ. ಸಿಎಂ ಸಿದ್ದರಾಮಯ್ಯನವರೇ ಇದೇನಾ? ನಿಮ್ಮ ಕೋಮು ಸೌಹಾರ್ದ ರೂಪಿಸುವ ಚಿಂತನೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಕಟುವಾಗಿ ಪ್ರಶ್ನಿಸಿ, ಟೀಕಿಸಿದ್ದಾರೆ.
ಜಿಲ್ಲೆಯ ರಾಗಿಗುಡ್ಡದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ವರದಿಗಾರರಿಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಈವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ಅಷ್ಟೇ ದಾಖಲಾಗಿದೆ. ಕೂಡಲೇ ತಪ್ಪಿತಸ್ಥರನ್ನು ಬಂಧಿಸುವಂತೆ ಅವರು ಆಗ್ರಹಿಸಿದ್ದಾರೆ.
ನಾವು ಪೂಜೆ ಸಲ್ಲಿಸುತ್ತಿರುವ ದೇವರನ್ನು ಮುಸ್ಲೀಂ ಗೂಂಡಾಗಳು ಕಾಲಲ್ಲಿ ಒದೆದಿದ್ದಾರೆ. ನಮ್ಮ ಧಾರ್ಮಿಕ ಭಾವನೆಗಳಿಗೆ ಅವಮಾನ ಮಾಡಿದ್ದಾರೆ. ಪರಿಶಿಷ್ಠರು ಕಷ್ಟಪಟ್ಟು ಕಟ್ಟದ ದೇವಸ್ಥಾನವಿದು. ಇದಕ್ಕೆ ಇಷ್ಟು ಅಪಮಾನ ಮಾಡಿದರೂ ಯಾಕೆ ಕ್ರಮ ಕೈಗೊಂಡಿಲ್ಲ. ಪ್ರಶ್ನೆ ಮಾಡಿದರೇ ಮಹಿಳೆಯ ಮೇಲೆ ಏಕವಚನದಲ್ಲಿ ಮಾತನಾಡಿದ್ದಾನೆ. ಮನಾವು ಶಾಂತಿಯಾಗಿದ್ದೇವೆ, ಇನ್ನೂ ಕ್ರಮ ತೆಗೆದುಕೊಂಡಿಲ್ಲ ಎಂದರೇ ಶಾಂತವಾಗಿ ಕೂರುವುದಕ್ಕೆ ಸಾಧ್ಯವಿಲ್ಲ ಎಂದು ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.
ಕೋಮು ಸಂಘರ್ಷವನ್ನು ನಿಗ್ರಹಿಸುವ ಉದ್ದೇಶದಿಂದ ವಿಶೇಷ ಕಾರ್ಯಪಡೆಯನ್ನು ನಿಯೋಜನೆ ಮಾಡಿದ್ದಾರೆ. ಆ ನಿಗ್ರಹ ದಳ ಮಾಡಿದ್ದು ಯಾವ ಪ್ರಯೋಜನಕ್ಕೆ ಬಂತು ಎಂದು ಪ್ರಶ್ನಿಸಿದ್ದಾರೆ.