ದಾವಣಗೆರೆ: ಸಿದ್ದರಾಮಯ್ಯ ಸಮಾಜವಾದಿಲ್ಲ ಮಜಾವಾದಿ. ಸಿದ್ದರಾಮಯ್ಯ ಒಬ್ಬ ಡೋಂಗಿ ರಾಜಕಾರಣಿ.ಕಾಂಗ್ರೆಸ್ ಬರುವ ಮುಂಚೆ ಸರಿ ಇದ್ರೂ .ಈಗ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ಛಲವಾದಿ ನಾರಾಯಣಸ್ವಾಮಿ ಮುಖ್ಯಮಂತ್ರಿ ಊಟ ತಿಂಡಿ ಬಿಟ್ಟು ಪ್ರಚಾರದಲ್ಲಿ ತೊಡಗಿದ್ದಾರೆ. ಯಾಕಂದ್ರೆ ಎರಡು ಕ್ಷೇತ್ರದಲ್ಲಿ ನಮ್ಮ ವಿರೋಧಿ ಅಲೆ ಇದೆ ಅಂತ ಗೊತ್ತಾಗಿದೆ 2028 ರ ಚುನಾವಣೆ ಬಂದ್ರೆ ನಮ್ಮ ಸ್ಥಿತಿ ಗಂಭೀರ ಆಗಿದೆ ಅಂತ ಗೊತ್ತಾಗಿದೆ. ಮುಖ್ಯಮಂತ್ರಿ ಹೋದಲ್ಲಿ ಬರ್ತರೆ ಅಂತ ರೋಡುಗಳಿಗೆ ಸಿಂಗಾರ ಮಾಡ್ತಾ ಇದ್ದಾರೆ ಮುಖ್ಯ ಮಂತ್ರಿ ಹೋದಲ್ಲಿ ದುಡ್ಡು ಕೊಟ್ಟಜ್ ಜನ ಸೇರಿಸ್ತಾರೆ ಎಂದು ಗುಡುಗಿದ್ದಾರೆ.
ಇನ್ನು, ಒಲಮೀಸಲಾತಿಯಲ್ಲಿ ದಲಿತರಿಗೆ ಮೋಸ ಮಾಡಿದ್ದೀರಿ. 4ಲಕ್ಷ ಹುದ್ದೆಗಳು ಖಾಲಿ ಇವೆ ಇವರು ಯಾರ ಪರ್ಮಿಷನ್‌ಗೆ ಕಾಯ್ತ ಇದ್ದಾರೆ. ಎಸ್‌ಇಪ ಟಿಎಸ್‌ಪಿ ಹಣ ದಲಿತರಿಗೆ ಇರುವ ಹಣವನ್ನುಗ್ಯಾರಂಟಿಗೆ ಬಳಸಿಕೊಳ್ತಾ ಇದ್ದಾರೆ. ಒಂದು ಕಡೆ ಘೋಷಣೆ ಮತ್ತೊಂದು ಕಡೆ ಶೋಷಣೆ .ನೀವು ಮಾಡುವ ಶೋಷಣೆಯಿಂದ ನಿಮ್ಮನ್ನ ಜನರು ತಿರಸ್ಕಾರ ಮಾಡ್ತಾ ಇದ್ದಾರೆ ಎಂದು ಹೇಳಿದ್ದಾರೆ.
ದಲಿತರು, ಮುಸ್ಲಿಮರಿಗೆ ಮೋಸ ಮಾಡ್ತಾ ಇದ್ದೀರಿ. ಬಿಜೆಪಿ ಬಂದ್ರೆ….? ಅನ್ನೋ ಮಾತು ಇಡ್ಕೊಂಡು ಅಲ್ಪ ಸಂಖ್ಯಾತ ಓಟುಗಳನ್ನು ಪಡೀತಾ ಇದ್ದೀರಿ. ಇದೀಗ
ಮುಸ್ಲಿಮರಿಗೆ ಸ್ವಾಭಿಮಾನದ ಪ್ರಶ್ನೆ ಬಂದಿದೆ. ಕಾಂಗ್ರೆಸ್ ಗೆದ್ರೆ ಮುಸ್ಲಿಂ ಸ್ವಾಭಿಮಾನ ಸೋಲುತ್ತೆ. ಕಾಂಗ್ರೆಸ್ ಸೋತ್ರೆ ಮುಸ್ಲಿಂ ಸ್ವಾಭಿಮಾನ ಗೆಲ್ಲುತ್ತೆ ಎಂದಿದ್ದಾರೆ.
ಜಮೀರ್ ಅಹಮ್ಮದ್‌ಗೆ ಯಾಕೆ ದಾವಣಗೆರೆಗೆ ಬರ್ತಿರ ಎಂದು ಕಾಂಗ್ರೆಸ್‌ನವರೇ ಹೇಳುತ್ತಾರೆ. ಮುಸ್ಲಿಮರನ್ನು ನೇರವಾಗಿ ಹತ್ತಿಕ್ಕುವ ಕೆಲಸ ಆಗ್ತ ಇದೆ ಅಹಿಂದ ಅಂತ ಹೇಳಿ ದಲಿತ ಮತ್ತು ಮುಸ್ಲಿಮರನ್ನು ಮುಗಿಸಿದ್ದೀರಿ. ನೀವು ಟಿಕೆಟ್ ಕೊಟ್ಟಿರುವ ಸಮರ್ಥ್ ಅಹಿಂದನ? ಸಿದ್ದರಾಮಯ್ಯ ಸಮಾಜವಾದಿಲ್ಲ ಮಜಾವಾದಿ. ಸಿದ್ದರಾಮಯ್ಯ ಡೋಂಗಿ ರಾಜಕಾರಣ ಮಾಡ್ತಾ ಇದ್ದಾರೆ. ಕಾಂಗ್ರೆಸ್ ಬರುವ ಮುಂಚೆ ಸರಿ ಇದ್ರೂ .ಈಗ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡ್ತಾ ಇದ್ದಾರೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : ಸಾಲರಾಮಯ್ಯ ಅಲ್ಲ, ಕಳ್ಳ ರಾಮಯ್ಯ ಅನ್ನೋದೇ ಸರಿ – ಸಿಎಂ ವಿರುದ್ಧ ಹೆಚ್‌ಡಿಕೆ ಕಿಡಿ



















