ಬೆಂಗಳೂರು: ಸಿಎಂ ಸಿದ್ದರಾಮಯ್ಯಗೆ (Siddaramaiah) ಬಂಡೆಯಿಂದಲೇ ತೊಂದರೆ ಎಂದು ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ (H. D. Kumaraswamy) ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳದಲ್ಲಿ ಮಳೆ ಬಂದು ಭೂಕುಸಿತ ಆದ ವೇಳೆ ಬಂಡೆಗಳಿಂದ ಅನಾಹುತ ಉಂಟಾಗುವಂತಾಯಿತು ಎಂದು ಡಿಸಿಎಂ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಕ್ಕೆ ಪ್ರತಿಭಟನೆ ನಡೆಸುತ್ತಿದ್ದೀರಿ. ನಿನ್ನೆಯಿಂದ ಸಂವಿಧಾನ ಬಿಕ್ಕಟ್ಟು ಅಂತಾ ಪ್ರತಿಭಟನೆ ನಡೆಸಿದ್ದೀರಿ. ಪಾರ್ಲಿಮೆಂಟ್ ಗೆ ಸಂವಿಧಾನ ಪುಸ್ತಕ ಹಿಡಿದು ಬಂದರಲ್ಲಪ್ಪ. ಪ್ರಮಾಣ ವಚನ ಸ್ವೀಕರಿಸಲು. ಇದೇನಾ ನಿಮ್ಮ ಸಂವಿಧಾನ ರಕ್ಷಣೆ? ಎಂದು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ನಮ್ಮ ಹಾಗೂ ನಿಮ್ಮ ನಡುವಿನ ವ್ಯತ್ಯಾಸ. ನಾವು ಕಾನೂನಿಗೆ ಗೌರವ ನೀಡುತ್ತೇವೆ. ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದು ನಾನು ಹೇಳಲ್ಲ. ಅವರು ಕೂಡುವುದೂ ಇಲ್ಲ ಎಂಬುವುದು ಗೊತ್ತು. ಆದರೆ, ಕಾನೂನು ಅಂತಾ ಇದೆ. ಅದಕ್ಕಾದರೂ ತಲೆ ಭಾಗಬೇಕು ಎಂದು ಹೇಳಿದ್ದಾರೆ.