ವಿಜಯಪುರ: ಸಿಎಂ ಸಿದ್ದರಾಮಯ್ಯ ಅವರು ಮುಸ್ಲಿಂರಿಗೆ ಏನೂ ಮಾಡುತ್ತಿಲ್ಲ. ಒಂದೂವರೆ ವರ್ಷವಾದರೂ ಯಾವುದೇ ಕಾರ್ಯಗಳನ್ನು ಮುಸ್ಲಿಂರ ಪರ ಮಾಡಿಲ್ಲ ಎಂದು ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ಬೇಸರ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಿಎಂ ಮೇಲೆ ನಾವು ವಿಸ್ವಾಸ ಇಟ್ಟಷ್ಟು ಕೆಲಸಗಳು ಆಗಿಲ್ಲ. ಮುಸ್ಲಿಂರಿಗೆ ಮೀಸಲಾತಿ ಸಿಕ್ಕಿಲ್ಲ. ಹಿಜಾಬ್ ಬಗ್ಗೆ ಸುಪ್ರೀಂಕೋರ್ಟ್ ಆದೇಶವಾಗಿದ್ರು ನೋಟಿಫಿಕೇಶನ್ ಮಾಡಿಲ್ಲ. ಸಿದ್ದರಾಮಯ್ಯ ಕೆಲವೊಂದು ನಿರ್ಧಾರ ತೆಗೆದುಕೊಳ್ಳುವಲ್ಲಿ ಹಿಂದೆಮುಂದೆ ನೋಡುತ್ತಿದ್ದಾರೆ. ಅವರು ಯಾವಾಗಲೂ ಮುಸ್ಲಿಂರನ್ನು ಓಲೈಸಿಲ್ಲ. ಹೆಚ್ಚುವರಿಯಾಗಿ ಮುಸ್ಲಿಂರಿಗೆ ಏನೂ ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್, ಬಿಜೆಪಿ ಪಕ್ಷದವರು ಮುಸ್ಲಿಂರನ್ನು ಬಿಟ್ಟು ಬಿಡಿ. ನಾವು ಏನೋ ಒಂದು ವ್ಯಾಪಾರ ಮಾಡಿಕೊಂಡು ಬದುಕುತ್ತೇವೆ. ಸಿಎಂ ಮೇಲೆ ಆರೋಪ ಕೇಳಿ ಬಂದಾಗ ಅವರ ಪರವಾಗಿ ಮಾತನಾಡಿದೆ. ಸಿದ್ದರಾಮಯ್ಯ ಮೇಲೆ ಅಪಾದನೆ ಬಂದಿದ್ದು ತಪ್ಪು. ಅವರ ಆ ರೀತಿ ಕೆಲಸ ಮಾಡಿಲ್ಲ. ಸಿದ್ದರಾಮಯ್ಯರ ಮೇಲೆ ಮುಡಾ ಒಂದು ಪ್ರಕರಣವಷ್ಟೇ. ಬಿಜೆಪಿಯವರು ಅದನ್ನು ದೊಡ್ಡ ಹಗರಣದ ರೀತಿ ಬಿಂಬಿಸುತ್ತಿದ್ದಾರೆ ಎಂದು ಗುಡುಗಿದ್ದಾರೆ.