ಬೆಂಗಳೂರು : ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರತಿಭಟನೆ ಹಕ್ಕು ಕಿತ್ತುಕೊಂಡಿದ್ದಾರೆ. ಅತಿಕ್ರಮಣ ಮಾಡಿದ್ದಾರೆ. ಎಂದು ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ಗೋವಿಂದ ಕಾರಜೋಳ ಬಿಜೆಪಿ ಸ್ಥಳೀಯರಿಗೆ ಮನೆ ಹಂಚಿಕೆ ಮಾಡಬೇಕು. ನಿಯಮಾನುಸಾರ ಮನೆ ಹಂಚಿಕೆ ಮಾಡಬೇಕು. ಬಾಂಗ್ಲಾದೇಶದಿಂದ ಬಂದವರಿಗೆ ಕೊಡ್ತಿದೆ. ಸ್ಥಳೀಯರಿಗೆ ಮನೆ ಕೊಡಬೇಕು ಅಂತ ಬಿಜೆಪಿ ಪ್ರತಿಭಟನೆ ಮಾಡಲು ಹೊರಟ್ರೆ ಅವಕಾಶ ನಿಡ್ಲಿಲ್ಲ ಇದನ್ನ ಖಂಡಿಸ್ತೇನೆ ಎಂದು ಆಕ್ರೋಶಿಸಿದರು.
ಸಿದ್ದರಾಮಯ್ಯ ಅವರು ದೀನ ದಲಿತರ ವಿರೋಧಿಗಳಿದ್ದಾರೆ. ದಲಿತರ ಮನೆ ಕಳೆದುಕೊಂಡಿರೋರಿಗೆ ಕೊಟ್ಟಿಲ್ಲ. ಮೊದಲು ಅವರಿಗೆ ಕೊಡಬೇಕು. ದಲಿತ ಹೆಣ್ಣು ಮಕ್ಕಳ ಕೊಲೆ ಆಗ್ತಿದೆ. ದಲಿತರ ಮೇಲೆ ದೌರ್ಜನ್ಯ ಆಗ್ತಿದೆ. ಇನಾಂ ವೀರಾಪುರದಲ್ಲಿ ದಲಿತ ಮಹಿಳೆ ಹತ್ಯೆ ಆಗಿದೆ. ಉಸ್ತುವಾರಿ ಸಚಿವರಾಗಲಿ, ಗೃಹ ಸಚಿವರು ಹೋಗಿರಲಿಲ್ಲ. ನಾವು ಗಲಾಟೆ ಮಾಡಿದ ಬಳಿಕ ಗೃಹಸಚಿವರು, ಸಮಾಜಕಲ್ಯಾಣ ಸಚಿವರು ಹೋಗ್ತಾರೆ ಎಂದು ಕಿಡಿಕಾರಿದ್ದಾರೆ.
SCP TSP ಹಣ ದುರುಪಯೋಗ ಮಾಡಿಕೊಳ್ತಿದ್ದಾರೆ. ರಾಜ್ಯದ ಜನ ಬಂಡಾಯವೇಳುವ ಮುನ್ನ ಎಚ್ಚೆತ್ತುಕೊಳ್ಳಬೇಕು. ಇಲ್ಲ ಜನ ದಂಗೆ ಏಳ್ತಾರೆ. ಬಳ್ಳಾರಿಯಲ್ಲಿ ಕಾಂಗ್ರೆಸ್ ಶಾಸಕನ ಮಾತು ಕೇಳಿದ್ದೀರ. ಬಿಜೆಪಿ ಬಗ್ಗೆ ಜನಾರ್ದನ ರೆಡ್ಡಿ ಬಗ್ಗೆ ಏನೆಲ್ಲಾ ಮಾತಾಡಿದ್ದಾರೆ. ಅವರನ್ನು ಪಕ್ಷದಿಂದ ವಜಾ ಮಾಡಬೇಕು. ಸಚಾ ಅನ್ನೋ ರೀತಿ ಮಾತಾಡ್ತಾರೆ. ಕಾಂಗ್ರೆಸ್ ಇಂದ ಹೋದ ಕಮಿಟಿ ಅವರನ್ನ ಉತ್ತಮ ಕೆಲಸಗಾರ ಅಂತ ಹೇಳ್ತಾರೆ. ಕೊಂದವನಿಗೆ ಬಹುಪರಾಕ್ ಹಾಕ್ತಾರೆ. ಜನಾರ್ದನ ರೆಡ್ಡಿ ಅವರಿಗೆ ರಕ್ಷಣೆ ಕೊಡಬೇಕು ಅಂತ ಒತ್ತಾಯ ಮಾಡ್ತೇನೆ ಎಂದಿದ್ದಾರೆ.
ಇದನ್ನೂ ಓದಿ : ಉಡುಪಿ | ಪರಶುರಾಮ ಥೀಂ ಪಾರ್ಕ್‌ನ ತಾಮ್ರದ ಹೊದಿಕೆ ಎಗರಿಸಿದ ಕಳ್ಳರು ; ಸುನಿಲ್ ಕುಮಾರ್ ಆಕ್ರೋಶ


















