ಮೈಸೂರು : ಮೈಸೂರು ಕಾರ್ಯಕ್ರಮದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಸೋಮವಾರ) ಬೆಳಗ್ಗೆ ಅಗ್ರಹಾರದಲ್ಲಿರುವ ಫೇಮಸ್ ಮೈಲಾರಿ ಹೋಟೆಲ್‌ಗೆ ಭೇಟಿ ನೀಡಿ ಬಿಸಿ ಬಿಸಿ ಉಪಹಾರ ಸೇವಿಸಿದ್ದಾರೆ.

ಮೈಲಾರಿ ಹೋಟೆಲ್‌ಗೆ ತೆರಳಿದ ಸಿಎಂ ಸಿದ್ದರಾಮಯ್ಯನವರು, ತಮ್ಮ ನೆಚ್ಚಿನ ಉಪಹಾರವಾದ ಇಡ್ಲಿ, ಬೆಣ್ಣೆ ಮಸಾಲೆ ದೋಸೆ ಸವಿದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಚಿವ ಹೆಚ್.ಸಿ ಮಹದೇವಪ್ಪ, ಸಚಿವ ವೆಂಕಟೇಶ್ ಹಾಗೂ ಇನ್ನಿತರ ಗಣ್ಯರು ಸಾಥ್ ನೀಡಿದ್ದಾರೆ.

ಸಿಎಂ ಉಪಹಾರಕ್ಕೆ ಆಗಮಿಸಿರುವ ವಿಷಯ ತಿಳಿಯುತ್ತಿದ್ದಂತೆ ಸಾರ್ವಜನಿಕರು ಕಿಕ್ಕಿರಿದು ತುಂಬಿ ಸಿದ್ದರಾಮಯ್ಯರನ್ನು ಕಣ್ತುಂಬಿಕೊಂಡಿದ್ದಾರೆ. ಇನ್ನು ಕೆಲವರು ದೂರದಿಂದಲೇ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರಿಗೆ ಬಂದಿಳಿದ ಮೊದಲ ಚಾಲಕರಹಿತ ಪಿಂಕ್ ಮೆಟ್ರೋ | ಸಂಚಾರ ಆರಂಭ ಯಾವಾಗ?



















