ಚಾಮರಾಜನಗರ : ಸರ್ಕಾರದ ಖಜಾನೆ ಖಾಲಿಯಾಗಿದೆ, ಸ್ಥಿರತೆ ಹೋಗಿದೆ. ಸಿದ್ದರಾಮಯ್ಯ ಡಮ್ಮಿ ಸಿಎಂ ಆಗಿದ್ದಾರೆಂದು ಕೇಂದ್ರ ಸಚಿವ ವಿ.ಸೋಮಣ್ಣ ಲೇವಡಿ ಮಾಡಿದ್ದಾರೆ.
ಚಾಮರಾಜನಗರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ವಿ.ಸೋಮಣ್ಣ , ಸರ್ಕಾರದ ಹುಳುಕು ಮುಚ್ಚಿಕೊಳ್ಳಲು ಏನ್ ಬೇಕಾದರೂ ಮಾಡ್ತಾರೆ. ದೇಶ ಇದ್ರೆ ನಾವು ದೇಶಕ್ಕಿಂತ ಯಾರೂ ದೊಡ್ಡವರಿಲ್ಲ ಈ ಬಗ್ಗೆ ಹಿಂದೆ ಸಲಹೆ ಸೂಚನೆ ಕೊಟ್ಟಿದ್ದೇನೆ. ನಾನು ಹೇಳಿದ್ದು ತಲೆಗೆ ಹೋಗುತ್ತಿಲ್ಲ ಮಕ್ಕಳ ಆಟ ಅಂತ ಅಂದುಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಎರಡನೇ ಬಾರಿ ಸಿಎಂ ಆದಮೇಲೆ ಸಿದ್ದರಾಮಯ್ಯ ನಿಷ್ಕ್ರಿಯವಾಗಿದ್ದಾರೆ. ರಾಜ್ಯದ ಮುಗ್ಧ ಜನರ ಬಲಿಯಾಗಲು ಅವಕಾಶ ಕೊಡಬೇಡಿ. ಬಳ್ಳಾರಿಯಲ್ಲಿ ಏನ್ ಆಗಿದೆ ಅಂತ ಎಲ್ಲರಿಗೂ ಗೊತ್ತಿದೆ. ನಿಮ್ಮವರು ಮಾಡಿದ ಪಾಪದ ಕೆಲಸ ಹಾಗೂ ಪಟಾಲಂ ನಡೆದುಕೊಂಡ ರೀತಿ ಸರಿ ಮಾಡಿಕೊಳ್ಳದಿದ್ದರೇ ಮುಂದೊಂದು ದಿನ ನಿಮಗೂ ಕಟ್ಟಿಟ್ಟ ಬುತ್ತಿ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಸಿಎಂ ಬದಲಾಗಲ್ಲ ಮುನಿಯಪ್ಪ ಹೇಳಿಕೆ ವಿಚಾರ:
ಅವರಿಗೆ ಏನ್ ತೊಂದರೆಯಿದೆ ನನಗೆ ಗೊತ್ತಿಲ್ಲ ಅವರು ಉಳಿದು ಕೊಳ್ಳಲು ಈ ರೀತಿ ಮಾತನಾಡುತ್ತಿದ್ದಾರೆ. ಸಿಎಂ ಐದು ವರ್ಷ ಇರುತ್ತರಾ 25 ವರ್ಷ ಇರುತ್ತರಾ ನನಗೆ ಬೇಕಿಲ್ಲ ನಮಗೆ ಅಭಿವೃದ್ಧಿ ಅಷ್ಟೇ ಮುಖ್ಯ. ಮುನಿಯಪ್ಪ ಅವರೇ ಗಡುಸಾಗಿ ಮಾತನಾಡುವುದನ್ನು ಕಲಿಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಭೂಮಿಯ ಒಳಗೆ ಯಾವುದೇ ಬೆಲೆ ಬಾಳುವ ವಸ್ತುಗಳು ಸಿಕ್ಕಿದ್ರೂ ಅದು ಸರ್ಕಾರದ ಆಸ್ತಿ | ಹೆಚ್.ಕೆ.ಪಾಟೀಲ್



















