ಹುಬ್ಬಳ್ಳಿ: ಪೊಲೀಸರು ಮಾನಸಿಕ ಅಸ್ವಸ್ಥ ಮಹಿಳೆಯನ್ನ ಡಿಮ್ಹಾನ್ಸ್ ಗೆ ರವಾನಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಕಳೆದ 2 ತಿಂಗಳಿಂದ ಮಾನಸಿಕ ಅಸ್ವಸ್ಥ ಮಹಿಳೆ
ಹುಬ್ಬಳ್ಳಿಯ ಶಾರದಾ ವೃತ್ತದ ಬಳಿಯಿರುವ ರಸ್ತೆ ಪಕ್ಕದಲ್ಲಿ ವಾಸವಾಗಿದ್ರು.
ಸಾರ್ವಜನಿಕರ ಮೇಲೆ ಆಗಾಗ ಕಲ್ಲು ತೂರಿ, ಬೈದಾಡುತ್ತಿದ್ದಳು ಇದರಿಂದ ಸಾರ್ವಜನಿಕರು ಯಾವುದೇ ಕ್ಷಣದಲ್ಲಾದರು ಆಕೆಗೆ ತೊಂದರೆ ಕೊಡಬಹುದೆಂದು ಭಾವಿಸಿದ ಪೊಲೀಸರು, ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.
ಇನ್ಸ್ಪೆಕ್ಟರ್ ಎಂ.ಎಸ್ ಹೂಗಾರ ಸೂಚನೆ ಮೇರೆಗೆ, ಆಕೆಯನ್ನು 112 ವಾಹನದಲ್ಲಿ ಕರೆದೊಯ್ದು ನ್ಯಾಯಾಧೀಶರ ಎದುರು ಹಾಜರುಪಡಿಸಿ ನ್ಯಾಯಾಧೀಶರ ಅನುಮತಿ ಮೇರೆಗೆ ಧಾರವಾಡದ ಡಿಮ್ಹಾನ್ಸ್ ಗೆ ರವಾನೆ ಮಾಡಲಾಗಿದೆ. ಮಹಿಳೆ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಆದ್ರೆ ಆಕೆಗೆ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.