ಬೆಂಗಳೂರು: ಮಾಜಿ ಸಚಿವ ವರ್ತೂರ್ ಪ್ರಕಾಶ್ ಆಪ್ತೆ ಶ್ವೇತಾ ಗೌಡ ಚಿನ್ನದ ವ್ಯಾಪಾರಿಗೆ ವಂಚನೆ ಮಾಡಿರುವ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ರಾಜಕೀಯ ದ್ವೇಷಕ್ಕೆ ವಂಚಕಿ ಶ್ವೇತಾಳ ಬಳಕೆಯಾಗುತ್ತಿತ್ತಾ ಎಂಬ ಅನುಮಾನವೊಂದು ವ್ಯಕ್ತವಾಗುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಟಿಕೆಟ್ಗೆ ವರ್ತೂರ್ ಪ್ರಕಾಶ್, ಬಿಜೆಪಿ ಮುಖಂಡ ಓಂ ಶಕ್ತಿ ಛಲಪತಿ ಮಧ್ಯೆ ಫೈಟ್ ಇತ್ತು. ವಲಸೆ ಬಂದ ವರ್ತೂರ್ಗೆ ಟಿಕೆಟ್ ಬೇಡ ಎಂದು ಚಲಪತಿ ಪಟ್ಟು ಹಿಡಿದಿದ್ದರು. ಕೊನೆಗೂ ಟಿಕೆಟ್ ವರ್ತೂರ್ ಪಾಲಾಗಿತ್ತು. ಆದರೆ, ಮಗ್ಗಲು ಮುಳ್ಳಾಗಿರುವ ಚಲಪತಿಯನ್ನು ರಾಜಕೀಯವಾಗಿ ಮಟ್ಟ ಹಾಕುವುದಕ್ಕೆ ವರ್ತೂರ್ ಪ್ಲ್ಯಾನ್ ಮಾಡಿದ್ರಾ? ಎಂಬ ಅನುಮಾನ ಈಗ ವ್ಯಕ್ತವಾಗುತ್ತಿದೆ.
ಎದುರಾಳಿಗೆ ಖೆಡ್ಡಾ ತೋಡಲು ಶ್ವೇತಾಗೌಡಳ ಮೂಲಕ ವರ್ತೂರ್ ಪ್ಲ್ಯಾನ್ ಮಾಡಿದ್ದರು ಎಂಬ ಸಂಶಯ ವ್ಯಕ್ತವಾಗುತ್ತಿದೆ. ಹೀಗಾಗಿಯೇ ಪೊಲೀಸರು, ಮೈಸೂರ್ ಪಾಕ್, ಗುಲಾಬ್ ಜಾಮೂನ್ ರಹಸ್ಯ? ಬಿಡಿಸಲು ಮುಂದಾಗಿದ್ದಾರೆ.
ಬಿಜೆಪಿ ಮುಖಂಡ ಓಂ ಶಕ್ತಿ ಚಲಪತಿಗೆ ಗಾಳ ಹಾಕುವುದಕ್ಕೆ ಶ್ವೇತಾಗೌಡ ಮುಂದಾಗಿದ್ದಳು ಎನ್ನಲಾಗಿದೆ. ಬ್ಯುಸಿನೆಸ್ ಹೆಸರಿನಲ್ಲಿ ಕಾಂಟ್ಯಾಕ್ಟ್ ಮಾಡುವುದಕ್ಕೆ ಶ್ವೇತಾಗೌಡ ಪ್ರಯತ್ನಿಸಿದ್ದಳು ಎನ್ನಲಾಗಿದೆ. ಅವನ ಬಳಿ ಸಾಕಷ್ಟು ಹಣ ಇದೆ, ಇನ್ವೆಸ್ಟ್ ಮಾಡಿಸಬಹುದೆಂದು ವರ್ತೂರ್ ಮಾಹಿತಿ ಕೊಟ್ಟಿದ್ದಾರೆ ಎನ್ನಲಾಗಿದೆ. ಆನಂತರ ಶ್ವೇತಾ, ಫೇಸ್ಬುಕ್ ಮೂಲಕ ಚಲಪತಿಯನ್ನ ಕಾಂಟ್ಯಾಕ್ಟ್ ಮಾಡಿದ್ದಳು ಎಂದು ತಿಳಿದು ಬಂದಿದೆ. ಶ್ವೇತಾ ಚಲಪತಿ ಹೆಸರನ್ನು ಫೋನ್ನಲ್ಲಿ ಮೈಸೂರ್ ಪಾಕ್ ಎಂದು ಸೇವ್ ಮಾಡಿಕೊಂಡಿರುವುದು ಈಗ ಪತ್ತೆಯಾಗಿದೆ. ವರ್ತೂರ್ ಪ್ರಕಾಶ್ ಹೇಳಿಕೆಗಳು ಕೂಡ ಈಗ ಗೊಂತಲದಲ್ಲಿದ್ದು, ಈ ಕುರಿತು ತನಿಖೆಯ ನಂತರವೇ ಸತ್ಯ ಹೊರ ಬೀಳಬೇಕಿದೆ.