ಬೆಂಗಳೂರು: ಭಾರತದ ಯುವ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ (Shubman Gill) ಪ್ರಸಿದ್ಧ ಟೈರ್ ಬ್ರಾಂಡ್ ಎಮ್ಆರ್ಎಫ್ ಜತೆ ಹೊಸ ಬ್ಯಾಟ್ ಸ್ಪಾನ್ಸರ್ ಒಪ್ಪಂದ ಮಾಡಿಕೊಂಡಿದ್ದಾರೆ. ಅಂಡರ್-19 ದಿನಗಳಿಂದ CEAT ಬ್ರ್ಯಾಂಡ್ ಜತೆ ಜತೆ ಇದ್ದ ಗಿಲ್, ಇದೀಗ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ನಡೆಯುವಾಗ ಅವರ ಈ ಒಡಂಬಡಿಕೆಯನ್ನು ಅಂತ್ಯಗೊಳಿಸಿ, ಹೊಸದಾಗಿ ಎಮ್ಆರ್ಎಫ್ ಜತೆ ಕೈಜೋಡಿಸಿದ್ದಾರೆ.
MRF is delighted to welcome Shubman Gill to the MRF Family for a relationship that will endure like other Cricketing Greats who have been associated with MRF.#MRF #MRFKyaBatHai #ShubmanGill #MRFGenius pic.twitter.com/3OzKZa5H53
— MRF Tyres (@MRFWorldwide) March 4, 2025
ಈ ಒಪ್ಪಂದದ ಮೂಲಕ, ಗಿಲ್ ಈಗ ತಮ್ಮ ಆದರ್ಶ ಆಟಗಾರರಾದ ಸಚಿನ್ ತೆಂಡುಲ್ಕರ್ ಮತ್ತು ವಿರಾಟ್ ಕೊಹ್ಲಿಯ ಹಾದಿಯಲ್ಲಿಯೇ ಸಾಗಿದ್ದಾರೆ. ಆದರೆ, MRF ಬ್ಯಾಟ್ ಬಳಸಿದ ಮೊದಲ ಪಂದ್ಯದಲ್ಲಿ ಅವರು ಹೆಚ್ಚು ಆಡಲಿಲ್ಲ. ಆಸ್ಟ್ರೇಲಿಯಾ ವಿರುದ್ಧ ನಡೆದ ಸೆಮಿಫೈನಲ್‌ನಲ್ಲಿ 8 ರನ್ ಗಳಿಸಿ ಬೇನ್ ಡ್ವಾರ್ಷಿಯಸ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು.
MRF ಕೂಡ ಈ ಒಡಂಬಡಿಕೆಯನ್ನು ಅಧಿಕೃತವಾಗಿ ಘೋಷಿಸಿದ್ದು, ತಮ್ಮ X (ಹಳೆಯ Twitter) ಖಾತೆಯಲ್ಲಿ ವಿಶೇಷ ಪೋಸ್ಟ್ ಮೂಲಕ ಇದನ್ನು ಪ್ರಕಟಿಸಿದೆ.
“MRF ತನ್ನ ಹೊಸ ಸದಸ್ಯನಾಗಿ ಶುಭ್‌ಮನ್ ಗಿಲ್ ಅವರನ್ನು ಸ್ವಾಗತಿಸಲು ಹೆಮ್ಮೆಪಡುತ್ತಿದೆ. ಇದೊಂದು ದೀರ್ಘಕಾಲಿಕ ಸಂಬಂಧವಾಗಲಿದೆ, ಇದಕ್ಕೆ ಮೊದಲು ಎಂಆರ್‌ಎಫ್ ಜತೆ ಜತೆಯಾದ ದಿಗ್ಗಜ ಕ್ರಿಕೆಟಿಗರು ಸಾಕ್ಷಿ,” ಎಂದು MRF ಅವರ X ಖಾತೆಯಲ್ಲಿ ಪೋಸ್ಟ್ ಮಾಡಿದೆ.
2023ರಿಂದ ಶುಭ್‌ಮನ್ ಗಿಲ್ ಅಬ್ಬರ
2023ರಿಂದ ಗಿಲ್ ಅವರ ಬ್ಯಾಟಿಂಗ್ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಅವರು 2023ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತ್ಯುತ್ತಮ ವರ್ಷವನ್ನು ಕಳೆದಿದ್ದು, 1584 ರನ್ ಗಳಿಸಿದರು. ಇದನ್ನು 63.36 ಸರಾಸರಿ ಮತ್ತು 105.45 ಸ್ಟ್ರೈಕ್ ರೇಟ್‌ನಲ್ಲಿ ದಾಖಲಿಸಿದ್ದರು.
ಇದನ್ನೂಓದಿ: US Tariffs: ಭಾರತದ ವಿರುದ್ಧವೂ ಸುಂಕದ ಸಮರ ಸಾರಿದ ಡೊನಾಲ್ಡ್ ಟ್ರಂಪ್; ಹೇಳಿದ್ದಿಷ್ಟು
2023ರಿಂದ ಇಂದಿನವರೆಗೆ 39 ಇನ್ನಿಂಗ್ಸ್‌ಗಳಲ್ಲಿ 2057 ರನ್ ಗಳಿಸಿ, ಏಕದಿನ ಕ್ರಿಕೆಟ್‌ನಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಈ ಅವಧಿಯಲ್ಲಿ 7 ಶತಕ ಹಾಗೂ 11 ಅರ್ಧಶತಕ ಗಳಿಸಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರಲ್ಲಿ, ಗಿಲ್ ಮೂರು ಇನ್ನಿಂಗ್ಸ್‌ಗಳಲ್ಲಿ 76 ಸರಾಸರಿಯಲ್ಲಿ 150 ರನ್ ಗಳಿಸಿದ್ದಾರೆ. ಅವರು ಬಾಂಗ್ಲಾದೇಶ ವಿರುದ್ಧ ಮೊದಲ ಪಂದ್ಯದಲ್ಲಿ 101*(129) ರನ್ ಗಳಿಸಿ ಭರ್ಜರಿ ಶತಕ ಬಾರಿಸಿ ಭಾರತಕ್ಕೆ 229 ರನ್ ಗುರಿಯನ್ನು ತಲುಪಿಸಲು ನೆರವಾಗಿದ್ದರು. ಇದೇ ವೇಳೆ, MRF ಜತೆ ಒಪ್ಪಂದ ಮಾಡಿಕೊಂಡಿರುವುದರಿಂದ ಗಿಲ್ ಕ್ರಿಕೆಟ್ ಇತಿಹಾಸದ ಪ್ರಮುಖ ಆಟಗಾರರ ಗುಂಪಿಗೆ ಸೇರ್ಪಡೆಯಾಗಿದ್ದಾರೆ. ಈ ಮೊದಲು ಬ್ರಿಯಾನ್ ಲಾರಾ, ಸ್ಟೀವ್ ವಾ, ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ ಮತ್ತು ಅವರ ಅಂಡರ್-19 ನಾಯಕ ಪೃಥ್ವಿ ಶಾ MRF ಜತೆ ಒಡಂಬಡಿಕೆ ಮಾಡಿಕೊಂಡಿದ್ದರು.