ಆಕ್ಸಿಯಮ್ -4 ಕಾರ್ಯಾಚರಣೆ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಜುಲೈ 14 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ತಿಳಿಸಿದೆ.
ನಾವು ಸ್ಟೇಷನ್ ಪ್ರೋಗ್ರಾಂನೊಂದಿಗೆ ಕೆಲಸ ಮಾಡುತ್ತಿದ್ದೇವೆ. ಆಕ್ಸಿಯಮ್ -4 ಪ್ರಗತಿಯನ್ನು ಎಚ್ಚರಿಕೆಯಿಂದ ಗಮನಿಸುತ್ತಿದ್ದೇವೆ. ಮಿಷನ್ ನ್ನು ಅನ್ ಡಾಕ್ ಮಾಡಲಾಗಿದೆ. ಪ್ರಸ್ತುತ ಅನ್‌ಡಾಕ್ ಮಾಡುವ ಗುರಿ ಹೆಚ್ಚಿನ ಬೀಟಾ ಅವಧಿಯ ನಂತರ ಜುಲೈ 14 ಆಗಿದೆ ಎಂದು ನಾಸಾ ವಾಣಿಜ್ಯ ಸಿಬ್ಬಂದಿ ಕಾರ್ಯಕ್ರಮದ ವ್ಯವಸ್ಥಾಪಕ ಸ್ಟೀವ್ ಸ್ಟಿಚ್ ಜುಲೈ 31 ರಂದು ಬಾಹ್ಯಾಕಾಶ ನಿಲ್ದಾಣಕ್ಕೆ ಕ್ರೂ-11 ಮಿಷನ್ ಕುರಿತು ತಿಳಿಸಿದ್ದಾರೆ.
ಆಕ್ಸಿಯಮ್ -4 ಮಿಷನ್ ನ್ನು ಜೂನ್ 25 ರಂದು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು. ಡ್ರ್ಯಾಗನ್ ಬಾಹ್ಯಾಕಾಶ ನೌಕೆ 28 ಗಂಟೆಗಳ ಪ್ರಯಾಣದ ನಂತರ ಜೂನ್ 26 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಡಾಕ್ ಮಾಡಿತ್ತು



















