ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಮಾಡಿದ್ದ ಶ್ರೇಯಸ್ ಅಯ್ಯರ್ ಗೆ ಹರಾಜಿನಲ್ಲಿ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.
ಶ್ರೇಯಸ್ ಖರೀದಿಗಾಗಿ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮಧ್ಯೆ ಭಾರೀ ಪೈಪೋಟಿ ನಡೆದಿತ್ತು. ಕೊನೆಗೂ ಶ್ರೇಯಸ್ ಪಂಜಾಬ್ ತಂಡವನ್ನು ಸೇರಿಕೊಂಡಿದ್ದಾರೆ.
2 ಕೋಟಿ ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದಿದ್ದ ಅಯ್ಯರ್ ಅವರನ್ನು ಖರೀದಿಸಲು ಆರಂಭದಿಂದಲೂ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮಧ್ಯೆ ನಡೆದ ಪೈಪೋಟಿ ವೇಳೆ. ಅಂತಿಮವಾಗಿ ಶ್ರೇಯಸ್, ಬರೋಬ್ಬರಿ 26.75 ಕೋಟಿ ರೂ.ಗೆ ಪಂಜಾಬ್ ಪಾಲಾದರು.
ಶ್ರೇಯಸ್ ಅಯ್ಯರ್, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದೇ ಎಲ್ಲರೂ ಊಹಿಸಿದ್ದರು. ಆದರೆ, ಡೆಲ್ಲಿಯ ಈ ಪ್ರಯತ್ನ ಫಲ ನೀಡಲಿಲ್ಲ. ಈ ಹಿಂದೆ ಡೆಲ್ಲಿ ತಂಡದ ಕೋಚ್ ಆಗಿದ್ದ ರಿಕಿ ಪಾಂಟಿಂಗ್, ಈ ಬಾರಿ ಪಂಜಾಬ್ ತಂಡವನ್ನು ಸೇರಿಕೊಂಡಿದ್ದಾರೆ. ಹೀಗಾಗಿ ಈ ಮೊದಲು ಶ್ರೇಯಸ್ ಜೊತೆ ಕೆಲಸ ಮಾಡಿದ್ದ ಪಾಂಟಿಂಗ್, ಪಂಜಾಬ್ನಲ್ಲೂ ಅದೇ ಕೆಲಸ ಮುಂದುವರೆಸಲಿದ್ದಾರೆ. ಹೀಗಾಗಿ ಪಂಜಾಬ್ ಶ್ರೇಯಸ್ ಅವರನ್ನು ಬುಟ್ಟಿಗೆ ಹಾಕಿಕೊಳ್ಳಲು ಯಶಸ್ವಿಯಾಗಿದೆ. ಅಲ್ಲದೇ, ಅರ್ಷದೀಪ್ ಸಿಂಗ್ ಕೂಡ 18 ಕೋಟಿ ರೂ.ಗೆ ಬಿಕರಿಯಾಗಿದ್ದು, ಪಂಜಾಬ್ ತಂಡದಲ್ಲೇ ಉಳಿದಿದ್ದಾರೆ.