ಕೊಪ್ಪಳ: ರಾಜ್ಯದಲ್ಲಿ ಯೂರಿಯಾ ಗೊಬ್ಬರಕ್ಕಾಗಿ ಬೇಡಿಕೆ ಹೆಚ್ಚಾಗಿದೆ. ನಿರಂತರ ಮಳೆ ಹಿನ್ನೆಲೆ ಶೀತದಿಂದ ಬೆಳೆ ಹಾಳಾಗಬಾರದು ಎಂದು ಯೂರಿಯಾ ಗೊಬ್ಬರವನ್ನು ಹಾಕಲಾಗುತ್ತದೆ.
ಆದರೆ, ರಾಜ್ಯದಲ್ಲಿ ಯೂರಿಯಾ ಗೊಬ್ಬರಕ್ಕೆ ಅಭಾವ ಇರುವ ಹಿನ್ನೆಲೆ ಖಾಸಗಿ ಆಗ್ರೋ ಏಜನ್ಸಿಗಳ ಮುಂದೆ ಯೂರಿಯಾ ಗೊಬ್ಬರಕ್ಕಾಗಿ ರೈತರು ಸರತಿ ಸಾಲಿನಲ್ಲಿ ನಿಂತು ಗೊಬ್ಬರವನ್ನು ಕೊಂಡುಕೊಳ್ಳುತ್ತಿದ್ದಾರೆ. ಕೊಪ್ಪಳ ಜಿಲ್ಲೆ ಕುಷ್ಟಗಿಯ ಎಪಿಎಮ್ ಸಿ ಶರಣಬಸವೇಶ್ವರ ಗೊಬ್ಬರದ ಅಂಗಡಿ ಮುಂದೆ ರೈತರು ಸರತಿ ಸಾಲಿನಲ್ಲಿ ನಿಂತ ಗೊಬ್ಬರವನ್ನು ಕೊಂಡುಕೊಳ್ಳುತ್ತಿದ್ದು, ಕೃಷಿ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ.