ಕೊಪ್ಪಳ: ರಾಜ್ಯದಲ್ಲಿ ಯೂರಿಯಾ ಗೊಬ್ಬರದ ಕೊರತೆ ಹೆಚ್ಚಾಗಿದೆ. ಈ ಹಿನ್ನೆಲೆ ರೈತರು ಯೂರಿಯಾ ಗೊಬ್ಬರಕ್ಕಾಗಿ ರಾತ್ರಿಯಿಡೀ ಕಾದು ಸೊಸೈಟಿ ಮುಂದೆ ಮಲಗಿರುವ ಪ್ರಸಂಗ ಕೊಪ್ಪಳ ತಾಲೂಕಿನ ಮುದ್ದಾಬಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದೆ ನಡೆದಿದೆ.
ಗೊಬ್ಬರ ಕೊಂಡುಕೊಳ್ಳಲು ರಾತ್ರಿಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದು, ಅಲ್ಲಿ ಮಲಗಿದ್ದಾರೆ. ಮುದ್ದಾಬಳ್ಳಿ- ಗೊಂಡಬಾಳ ನೂರಾರು ರೈತರು ರಸಗೊಬ್ಬರಕ್ಕಾಗಿ ಪರದಾಡುವಂತಾಗಿದೆ. ಅಲ್ಲದೆ ರಾತ್ರಿಯಿಡೀ ಸೊಸೈಟಿ ಮುಂದೆ ಮಲಗಿದ್ದ ರೈತರು, ಬೆಳಗ್ಗೆ ಆಗುತ್ತಿದ್ದಂತಯೇ ಸೊಸೈಟಿ ವಿರುದ್ಧ ಮುಗಿಬಿದ್ದಿದ್ದಾರೆ. ಸದ್ಯ, ರಾಜ್ಯದಲ್ಲಿ ಯೂರಿಯಾ ಗೊಬ್ಬರಕ್ಕಾಗಿ ಬೇಡಿಕೆ ಹೆಚ್ಚಾಗಿದ್ದು, ಕೃಷಿ ಇಲಾಖೆಯ ವಿರುದ್ಧ ರೈತರು ಅಸಮಾಧಾನ ಹೊರಹಾಕಿದ್ದಾರೆ.




















