ಬೆಂಗಳೂರು: ರಿಕ್ಕಿ ರೈ ಮೇಲೆ ಗುಂಡಿನ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಚಾಲಕ ದೂರುದಾರ ಬಸವರಾಜ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಎಫ್ ಐಆರ್ ದಾಖಲಾಗಿದೆ. ರಾಕೇಶ್ ಮಲ್ಲಿ, ಎರಡನೇ ಪತ್ನಿ ಅನುರಾಧ, ನಿತೀಶ್ ಎಸ್ಟೇಟ್ ಮಾಲೀಕ ನಿತೀಶ್ ಶೆಟ್ಟಿ ಮತ್ತು ವೈದ್ಯನಾಥ ಎಂಬುವವರ ಮೇಲೆ ದೂರು ದಾಖಲಾಗಿದೆ.
ಬೆಂಗಳೂರಿನ ಸದಾಶಿವನಗರ ಮನೆಗೆ ಬಿಡದಿ ಮನೆಯಿಂದ ರಿಕ್ಕಿ ರೈ ಹಾಗೂ ಚಾಲಕ, ಗನ್ ಮ್ಯಾನ್ ಹೊರಟಿದ್ದ ಸಂದರ್ಭದಲ್ಲಿ ದಾಳಿ ನಡೆದಿದೆ. ಸಂಜೆ ವೇಳೆ ಬೆಂಗಳೂರಿನ ಸದಾಶಿವನಗರದ ಮನೆಯಿಂದ ಬಿಡದಿಗೆ ಹೋಗಿದ್ದರು. ಮರಳಿ ಹಿಂದಿರುಗುತ್ತಿದ್ದ ವೇಳೆ ರಾತ್ರಿ 11 ಗಂಟೆ ಸಂದರ್ಭದಲ್ಲಿ ಹೊರಗೆ ಟಪ್ ಎಂದು ಜೋರಾದ ಶಬ್ದ ಕೇಳಿದೆ. ಸ್ವಲ್ಪ ದೂರು ಹೋಗಿ ಚೆಕ್ ಮಾಡಿಕೊಂಡಾಗ ಏನು ಗೊತ್ತಾಗಿಲ್ಲ.
ಬಿಡದಿ ಮನೆಯಿಂದ ರಿಕ್ಕಿ ರೈ ಬರುವಾಗ ಪರ್ಸ್ ಮರೆತು ಬಂದಿದ್ದರು. ಹೀಗಾಗಿ ಮರಳಿ ಮತ್ತೆ ಪರ್ಸ್ ತರಲು ಬಿಡದಿ ಮನೆಗೆ ಹೋಗಿದ್ದಾರೆ. ವಾಪಸ್ ಹೋಗಿ ಒಂದು ಗಂಟೆ ಬಳಿಕ ಬೆಂಗಳೂರಿಗೆ ಹೊರಟಿದ್ದರು. ಆಗ ಮನೆಯಿಂದ ಹೊರ ಬಂದ ಕೂಡಲೇ ಗುಂಡಿನ ದಾಳಿ ನಡೆದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಡೆದಿರುವ ಆರೋಪ ಕೂಡ ಕೇಳಿ ಬಂದಿದೆ.
ಎಫ್ ಐಆರ್ ನಲ್ಲಿ ರಿಕ್ಕಿ ರೈಗೆ ಆರೋಪಿಗಳಿಂದ ಬೆದರಿಕೆ ಇತ್ತು ಎಂಬ ಆರೋಪವನ್ನು ಕೂಡ ಚಾಲಕ ಬಸವರಾಜ್ ಮಾಡಿದ್ದಾರೆ. ಅವರ ಬಳಿ ಹೆಸರುಗಳನ್ನು ರಿಕ್ಕಿ ರೈ ಹೇಳಿಕೊಂಡಿದ್ದರು ಎಂದು ಚಾಲಕ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೇ, ರಿಕ್ಕಿ ರೈ ಹೇಳಿಕೆಯನ್ನು ಕೂಡ ಪೊಲೀಸರು ಆಸ್ಪತ್ರೆಯಿಂದ ದಾಖಲು ಮಾಡಿಕೊಂಡಿದ್ದಾರೆ. ಅಲ್ಲದೇ, 11ನೇ ಮಹಡಿಯಿಂದ ಎರಡನೇ ಮಹಡಿಗೆ ರಿಕ್ಕಿ ರೈ ಶಿಫ್ಟ್ ಮಾಡಲಾಗಿದೆ. ಆಪರೇಷನ್ ಹಿನ್ನೆಲೆಯಲ್ಲಿ ಎರಡನೇ ಮಹಡಿಗೆ ಶಿಫ್ಟ್ ಮಾಡಲಾಗಿದೆ. ಮೂಗು ಮತ್ತು ಭುಜದ ಕೆಳಗಿನ ಭಾಗಕ್ಕೆ ಗಾಯಗಳಾಗಿವೆ ಎನ್ನಲಾಗಿದೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.



















