ಪಾರ್ಕ್ ನಲ್ಲಿ ಗುಂಡಿನ ದಾಳಿ ನಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ 8 ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಈ ಘಟನೆ ಅಮೆರಿಕದ ಮಿಚಿಗನ್ ರಾಜ್ಯದ ಅತಿದೊಡ್ಡ ನಗರವಾದ ಡೆಟ್ರಾಯಿಟ್ ಹತ್ತಿರ ಇರುವ ವಾಟರ್ ಪಾರ್ಕ್ ನಲ್ಲಿಯೇ ಗುಂಡಿನ ದಾಳಿ ನಡೆದಿದೆ. ಈ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ 8 ಜನ ಗಾಯಗೊಂಡಿದ್ದಾರೆ. ಗುಂಡಿನ ದಾಳಿಯ ನಂತರ ಆರೋಪಿಯು ಹತ್ತಿರದ ಮನೆಯೊಂದರಲ್ಲಿ ಅಡಗಿಕುಳಿತಿದ್ದ. ಪೊಲೀಸರು ಮನೆಯನ್ನು ಸುತ್ತುವರೆದು ಒಳಗೆ ಪ್ರವೇಶಿಸಿದಾಗ ಶಂಕಿತ ವ್ಯಕ್ತಿಯ ಶವ ಅಲ್ಲಿ ಇತ್ತು. ಗುಂಡಿನ ದಾಳಿಯಲ್ಲಿ ಗಾಯಗೊಂಡವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ತನ್ನ ವಾಹನದಿಂದ ಇಳಿದು ಗುಂಡು ಹಾರಿಸಲು ಶುರು ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಘಟನಾ ಸ್ಥಳದಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಿದ್ದಾರೆ.