ಬೆಂಗಳೂರು: ಮಲಯಾಳಂ ಚಿತ್ರರಂಗ ಇತ್ತೀಚೆಗೆ ಪ್ಯಾನ್ ಮಟ್ಟದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಆದರೆ, ಈಗ ಜೂ. 1ರಿಂದ ಇಡೀ ಮಲಯಾಳಂ ಚಿತ್ರರಂಗ ಬಂದ್ ಆಗುತ್ತಿರುವ ಶಾಕಿಂಗ್ ಹೇಳಿಕೆಯೊಂದು ಬಿಡುಗಡೆಯಾಗಿದೆ.
ಹಿಂದಿನ ವರ್ಷದಲ್ಲಿ ಮಲಯಾಳಂ ಚಿತ್ರರಂಗ ಹೆಚ್ಚು ಸೂಪರ್ ಹಿಟ್ ಚಿತ್ರಗಳನ್ನು ನೀಡಿದೆ. ಇಷ್ಟೊಂದು ದೊಡ್ಡ ಹಿಟ್ ಚಿತ್ರಗಳನ್ನು ನೀಡಿದ್ದರೂ ಹಿಂದಿನ ವರ್ಷ ಮಲಯಾಳಂ ನಿರ್ಮಾಪಕರು ಸುಮಾರು 600 ರಿಂದ 700 ಕೋಟಿ ರೂ. ಹಣ ಕಳೆದುಕೊಂಡಿದ್ದಾರಂತೆ. ಸಿನಿಮಾದ ನಟ-ನಟಿಯರು ಮತ್ತು ತಂತ್ರಜ್ಞರು ತಮ್ಮ ಸಂಭಾವನೆ ಹೆಚ್ಚು ಮಾಡಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಸರ್ಕಾರದ ತೆರಿಗೆಗಳಿಂದಾಗಿಯೂ ಸಹ ಸಿನಿಮಾದ ಲಾಭದ ಹಣ ನಿರ್ಮಾಪಕರ ಕೈ ಸೇರದಂತಾಗಿದೆ. ಹೀಗಾಗಿ ಸಿನಿಮಾ ನಿರ್ಮಾಪಕರು, ವಿತರಕರು ಎಲ್ಲರೂ ಸೇರಿ ಬಂದ್ ಗೆ ಮುಂದಾಗಿದ್ದಾರೆ. ಸಂಪೂರ್ಣ ಮಲಯಾಳಂ ಚಿತ್ರರಂಗ ಬಂದ್ ಮಾಡಿ ಪ್ರತಿಭಟನೆ ನಡೆಸಲಿದ್ದಾರೆ.