ಬೆಂಗಳೂರು: ಗೃಹಜ್ಯೋತಿ ಫಲಾನುಭವಿಗಳಿಗೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ.
ಸ್ಮಾರ್ಟ್ ಮೀಟರ್ ಅಳವಡಿಸಿಕೊಂಡವರಿಗೆ ಜೀರೋ ಬಿಲ್ ಸಿಗುವುದಿಲ್ಲ. ಹೀಗಾಗಿ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಿಕೊಂಡಿರುವ ಗ್ರಾಹಕರು ಕಡ್ಡಾಯವಾಗಿ ಪ್ರತಿ ತಿಂಗಳು 116 ರೂ. ಪಾವತಿ ಮಾಡಬೇಕು.
ಸ್ಮಾರ್ಟ್ ಮೀಟರ್ ಹೊಂದಿರುವ ಗ್ರಾಹಕರು ಹತ್ತು ವರ್ಷಗಳ ಕಾಲ 116 ರೂ. ಪಾವತಿ ಮಾಡಬೇಕು. ಹೀಗಾಗಿ ಗೃಹಜ್ಯೋತಿ ಅನುಕೂಲ ಸಿಕ್ಕರೂ ಗ್ರಾಹಕರು 116 ರೂ. ಪಾವತಿ ಮಾಡಬೇಕಾಗಿದೆ. ಈಗ ಈ ಕಾನೂನನ್ನು ಜಾರಿ ಮಾಡಿರುವ ಇಂಧನ ಇಲಾಖೆ, ಇದು ಕೇಂದ್ರ ಸರ್ಕಾರದ ಕಾನೂನು ಅಂತಿದ್ದಾರೆ. ಇದಕ್ಕೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.