ಬೆಂಗಳೂರು: ವೈಟ್ ಬೋರ್ಡ್ ವಾಹನಗಳನ್ನು ಬಾಡಿಗೆಗೆ ಬಿಟ್ಟಿದ್ದವರಿಗೆ ಆರ್ ಟಿಔ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ, ಶಾಕ್ ನೀಡಿದ್ದಾರೆ.
ಬೆಳ್ಳಂಬೆಳಗ್ಗೆ ವಾಹನ ಮಾಲೀಕರಿಗೆ ಅಧಿಕಾರಿಗಳು ಶಾಕ್ ನೀಡಿದ್ದಾರೆ. ರಾಜಾಜಿನಗರ ಆರ್ ಟಿಓ ಅಧಿಕಾರಿ ನೇತೃತ್ವದಲ್ಲಿ ಅನಧಿಕೃತ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆದಿದೆ. ಅನಧಿಕೃತ ಆ್ಯಪ್ ಗಳನ್ನು ಬಳಸಿ ಖಾಸಗಿ ವಾಹನಗಳನ್ನು ಮಾಲೀಕರು ಬಾಡಿಗೆಗೆ ನೀಡಿದ್ದರು.
ಸ್ವೀಪ್ಟ್, ಫಾರ್ಚುನರ್ ನಂತಹ ಖಾಸಗಿ ವಾಹನಗಳನ್ನು ಮಾಲೀಕರು ಬಾಡಿಗೆಗೆ ಬಿಟ್ಟಿದ್ದರು. ಆ್ಯಪ್ ಗಳಲ್ಲಿ ರಿಜಿಸ್ಟರ್ ಮಾಡಿಕೊಂಡು ಬಾಡಿಕೆ ಹೊಡೆಯುತ್ತಿದ್ದ ವೈಟ್ ಬೋರ್ಡ್ ಮಾಲೀಕರಿಗೆ ಈಗ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಹೀಗೆ ಬಾಡಿಗೆ ಹೊಡೆಯುತ್ತಿದ್ದ 15 ವೈಟ್ ಬೋರ್ಡ್ ಕಾರ್ ಗಳನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಅಲ್ಲದ ಶಾಲಾ ವಾಹನಗಳನ್ನು ಕೂಡ ಸೀಜ್ ಮಾಡಲಾಗಿದೆ. ಒಟ್ಟು 3 ಶಾಲಾ ವಾಹನಗಳನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಆರ್ ಟಿಒ ಅಧಿಕಾರಿ ಶ್ರೀನಿವಾಸ್ ನೇತೃತ್ವದಲ್ಲಿ ಅನಧಿಕೃತ ವಾಹನಗಳ ಕಾರ್ಯಚರಣೆ ನಡೆದಿದೆ.