ಬೆಂಗಳೂರು: ಹೊಸದಾಗಿ ಯೆಲ್ಲೋ ಬೋರ್ಡ್ ವಾಹನ ಖರೀದಿ ಮಾಡುವವರಿಗೆ ಸರ್ಕಾರ ಶಾಕ್ ನೀಡಿದೆ.
ವಾಹನ ತೆರಿಗೆ ಹೆಚ್ಚಳದ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕಕ್ಕೆ ರಾಜ್ಯಪಾಲರಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಹತ್ತು ಲಕ್ಷದೊಳಗಿನ ಯೆಲ್ಲೋ ಬೋರ್ಡ್ ವಾಹನ ಖರೀದಿ ಮಾಡುವವರು ಇಂದಿನಿಂದ ಲೈಫ್ ಟೈಮ್ ಟ್ಯಾಕ್ಟ್ ಕಟ್ಟಬೇಕು.
ಕಟ್ಟಡ ಸಾಮಾಗ್ರಿ ಶಿಫ್ಟಿಂಗ್ ವಾಹನಗಳು ಮತ್ತು ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ಕಾರುಗಳಿಗೂ ದುಬಾರಿ ಟ್ಯಾಕ್ಸ್ ಪಾವತಿ ಮಾಡಬೇಕು. ಈ ಹಿಂದೆ ಹತ್ತು ಲಕ್ಷದೊಳಗಿನ ಯೆಲ್ಲೋ ಬೋರ್ಡ್ ವಾಹನಗಳಿಗೆ, ಪ್ರತಿ ಸೀಟ್ ಗೆ ಮೂರು ತಿಂಗಳಿಗೊಮ್ಮೆ 100 ರೂ. ನಂತೆ 4 ಸೀಟ್ ವಾಹನಕ್ಕೆ 400 ರೂ. ಪಾವತಿ ಮಾಡಬೇಕಿತ್ತು.
ಈಗ ನೂತನ ತಿದ್ದುಪಡಿ ವಿಧೇಯಕದಲ್ಲಿ ಅದನ್ನು ಬದಲಾಯಿಸಲಾಗಿದೆ. 10 ಲಕ್ಷ ದೊಳಗಿನ ಯೆಲ್ಲೋ ಬೋರ್ಡ್ ವಾಹನಗಳು ಶೇ.5ರಷ್ಟು ಲೈಫ್ ಟೈಮ್ ಟ್ಯಾಕ್ಸ್ ಕಟ್ಟಬೇಕು. 10 ಲಕ್ಷ ರೂ. ಯೆಲ್ಲೋ ಬೋರ್ಡ್ ಕಾರು ಖರೀದಿ ಮಾಡಿದರೆ ಇಂದಿನಿಂದ 50 ಸಾವಿರ ರೂ. ಲೈಫ್ ಟೈಮ್ ಟ್ಯಾಕ್ಸ್ ಪಾವತಿ ಮಾಡಬೇಕು. 25 ಲಕ್ಷ ರೂ. ಮೇಲ್ಪಟ್ಟ ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ವಾಹನಗಳಿಗೆ ಶೇ. 10ರಷ್ಟು ಟ್ಯಾಕ್ಸ್ ಪಾವತಿ ಮಾಡಬೇಕು. 25 ಲಕ್ಷ ರೂ. ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ಕಾರು ಖರೀದಿ ಮಾಡಿದರೆ 2.5 ಲಕ್ಷ ರೂ. ಟ್ಯಾಕ್ಸ್ ಪಾವತಿ ಮಾಡಬೇಕು. ಈ ಹಿಂದೆ 25 ಲಕ್ಷ ಮೇಲ್ಪಟ್ಟ ವಾಣಿಜ್ಯ ಬಳಕೆ ಎಲೆಕ್ಟ್ರಿಕ್ ಕಾರುಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿತ್ತು. ಕಟ್ಟಡ ಸಾಮಾಗ್ರಿಗಳ ಶಿಫ್ಟಿಂಗ್ ವಾಹನಗಳ ಮೇಲೆ ಈ ಹಿಂದೆ ( construction equipment vehicle ) ಶೇ. 6ರಷ್ಟು ಲೈಫ್ ಟೈಮ್ ಟ್ಯಾಕ್ಸ್ ವಿಧಿಸಲಾಗಿತ್ತು. ನೂತನ ಆದೇಶದಲ್ಲಿ ಶೇ.8ರಷ್ಟು ಲೈಫ್ ಟ್ಯಾಕ್ಸ್ ವಿಧಿಸಲಾಗಿದೆ.