ಬೆಂಗಳೂರು : ಬೆಂಗಳೂರಿನಲ್ಲಿ ಪಟಾಕಿ ಸುಡುವ ವೇಳೆ ಇಬ್ಬರು ಮಕ್ಕಳ ಕಣ್ಣಿಗೆ ಗಾಯವಾಗಿರು ಪ್ರತ್ಯೇಕ ಘಟನೆ ಸಂಭವಿಸಿದೆ. ಈ ಗಾಯಾಳುಗಳಿಗೆ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
12 ಮತ್ತು14 ವರ್ಷದ ಇಬ್ಬರು ಬಾಲಕರಿಗೆ ಗಾಯವಾಗಿದ್ದು,. ಒಬ್ಬ ಬಾಲಕನಿಗೆ ಪಟಾಕಿ ಸಿಡಿತ ಹಾಗೂ ಇನ್ನೊಬ್ಬನಿಗೆ ರಾಕೆಟ್ ನಿಂದ ಗಾಯಗೊಂಡಿದ್ದಾರೆ.
ಒಂದು ಪ್ರಕರಣದಲ್ಲಿ ಪಟಾಕಿ ಸಿಡಿಸುತ್ತಿದ್ದನ್ನು ವೀಕ್ಷಿಸುತ್ತಿದ್ದ ವೇಳೆ ಕಣ್ಣಿಗೆ ಬಡಿದ ಪಟಾಲಿಯಿಂದ ತೀವ್ರ ಗಾಯಗೊಂಡಿದ್ದಾನೆ. ಇನ್ನೊಂದರಲ್ಲಿ ಪಟಾಕಿ ಸಿಡಸಲು ತೆರಳಿ ಸಣ್ಣಪುಟ್ಟ ಗಾಯಗಳಾಗಿವೆ.