ಬೆಂಗಳೂರು : ಹೆಬ್ಬಾಳದ ಬಳಿ ಮೆಟ್ರೋ ಕಾಮಗಾರಿಗೆ ರಾಜ್ಯ ಸರ್ಕಾರದಿಂದ ಭೂಮಿ ಬಿಟ್ಟುಕೊಡುವುದು ವಿಳಂಬಗವಾಗುತ್ತದೆ ಎಂದು ಆರೋಪ ಕೇಳಿ ಬಂದಿದೆ.
ರಾಜ್ಯ ಸರ್ಕಾರದಿಂದ ಮೆಟ್ರೋ ನಿರ್ಮಾಣಕ್ಕೆ 45 ಎಕರೆ ಭೂಮಿಯನ್ನು ನೀಡುವಂತೆ ಮೆಟ್ರೋ ಬೇಡಿಕೆ ಇಟ್ಟಿದ್ದು, ರಾಜ್ಯ ಸರ್ಕಾರ ಒಂಬತ್ತು ಎಕರೆ ಜಾಗ ಅಷ್ಟನ್ನೇ ನೀಡುವುದಾಗಿ ಹೇಳಿದೆ.
ಸದ್ಯ ರಾಜ್ಯ ಸರ್ಕಾರ ಮತ್ತು ಮೆಟ್ರೋ ನಡುವೆ ಬಿಜೆಪಿ ಕೇಂದ್ರ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಪ್ರವೇಶಿಸಿದ್ದು, ಹೆಬ್ಬಾಳದ ಬಳಿ ಇರುವ ಜಾಗ ಎಸ್‌ಎಂ ಕೃಷ್ಣ ಸಿಎಂ ಆಗಿದ್ದಾಗ KIADB ರೈತರಿಂದ ಭೂಮಿಯನ್ನು ಪಡೆದುಕೊಳ್ಳಲಾಗಿತ್ತು. ಈವರೆಗೆ ರೈತರಿಗೆ ಸೂಕ್ತಪರಿಹಾರ ಸಿಕ್ಕಿಲ್ಲ. ಈ ಜಮೀನು ಖಾಲಿಯಾಗಿಯೇ ಇದೆ, ಕಸ ತುಂಬಿಕೊಂಡಿದೆ. ಈಗ ಉಳಿದುಕೊಂಡಿರುವ 48 ಎಕರೆ ಮೆಟ್ರೋಗೆ ಕೊಡಬೇಕು ಎಂದು ಹೇಳಿದರು.
ಇದೇ ಮಾರ್ಗದಲ್ಲಿ ಏರ್‌ಪೋರ್ಟ್‌ಗೆ ಮೆಟ್ರೋ ಹಾದು ಹೋಗುತ್ತದೆ. ಏರ್‌ಪೋರ್ಟ್‌ಗೆ ಹೋಗುವವರಿಗೆ ಇಲ್ಲೇ ಬೋರ್ಡಿಂಗ್ ಪಾಸ್, ಇಮಿಗ್ರೇಷನ್ ಕಚೇರಿ ಮಾಡಿಕೊಡಬೇಕು, ಆಗ ಅನುಕೂಲ ಆಗುತ್ತದೆ. ಕಳೆದ ಮೇ1 ರಂದು ಕಾಂಗ್ರೆಸ್ ಸರ್ಕಾರ ನಿರ್ಧಾರ ತಗೊಳ್ತು, 48 ಎಕರೆ ಮೆಟ್ರೋಗೆ ಕೊಡುವ ತೀರ್ಮಾನವನ್ನು ಸರ್ಕಾರ ಮಾಡಿತ್ತು. ಆದರೇ, ತಿಂಗಳೊಳಗೆ ಯೂಟರ್ನ್ ಹೊಡೆದಿದೆ. ಯಾವ ರಿಯಲ್ ಎಸ್ಟೇಟ್ ಕಂಪೆನಿ ಸರ್ಕಾರಕ್ಕೆ ಸೂಟ್‌ಕೇಸ್ ಕೊಟ್ಟಿದೆ ? ಸರ್ಕಾರ ಯಾಕೆ ತನ್ನ ನಿರ್ಣಯ ತಾನೇ ಕೈಬಿಡಲು ಹೊರಟಿದೆ? ಸರ್ಕಾರ ಇದಕ್ಕೆ ಸ್ಪಷ್ಟೀಕರಣ ಕೊಡಬೇಕು ಎಂದು ಶೋಭಾ ಒತ್ತಾಯಿಸಿದ್ದಾರೆ.
ಇನ್ನು, ಸರ್ಕಾರ ಖಾಸಗಿ ಡೆವೆಲಪರ್ ಗೆ ಭೂಮಿ ನೀಡುತ್ತಿದೆ ಎಂದು ಬಿಜೆಪಿ ಆರೋಪ ಹೊರಿಸುತ್ತಿದೆ. ಈ ಸಂಬಂಧಿಸಿದಂತೆ ಈಗಾಗಲೇ ಕೇಂದ್ರ ಸಚಿವ ವಿ ಸೋಮಣ್ಣ, ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು.



















