ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಶಸ್ತ್ರ ಚಿಕಿತ್ಸೆಯ ಹಿನ್ನೆಲೆಯಲ್ಲಿ ಅಮೇರಿಕಕ್ಕೆ ತೆರಳಿದ್ದಾರೆ. ಫ್ಲೋರಿಡಾದ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ನಲ್ಲಿ ದಾಖಲಾಗಿರುವ ಶಿವರಾಜ್ ಕುಮಾರ್ ಗೆ ಇಂದು ಶಸ್ತ್ರ ಚಿಕಿತ್ಸೆ ನಡೆಯುತ್ತಿದೆ. ಶಸ್ತ್ರ ಚಿಕಿತ್ಸೆ ಯಸಸ್ವಿಯಾಗಲಿ ಎಂದು ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ.
ನೆಚ್ಚಿನ ನಟನ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆಯಲಿ. ಅವರ ಅರೋಗ್ಯ ಸುಧಾರಣೆಯಾಗಲಿ ಎಂದು ಮಲ್ಲೇಶ್ವರಂನ 13ನೇ ಅಡ್ಡ ರಸ್ತೆಯಲ್ಲಿನ ಅಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಲ್ಲೇಶ್ವರಂ ಕರ್ನಾಟಕ ರತ್ನ ಡಾ ರಾಜ್ ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ವಿಶೇಷ ಪೂಜೆ ಹಾಗೂ ಅಭಿಷೇಕ ನಡೆಸಲಾಯಿತು.
ಹಿರಿಯ ಅಭಿಮಾನಿಗಳಾದ ಸೋಮಣ್ಣ ಹಾಗೂ ಅಖಿಲ ಕರ್ನಾಟಕ ಡಾ ಶಿವರಾಜ್ ಕುಮಾರ್ ಸೇನಾ ಸಮಿತಿ ಅಧ್ಯಕ್ಷ ಟಿ ನಾರಾಯಣ್, ಗಂಡುಗಲಿ ಡಾ. ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ ಅಧ್ಯಕ್ಷ ಎಂ.ಮಲ್ಲ, ಗೆದ್ದಲಹಳ್ಳಿ ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ರಾಜೇಂದ್ರ, ಬಿಜೆಪಿಯ ಮುಖಂಡ ಶ್ರೀಧರ, ಶಿವಣ್ಣ, ಸಾಗರ್, ಪ.ರಾ. ರಾಘವೇಂದ್ರ, ಬೀಡಾ ಜನಾರ್ಧನ್, ಶ್ರೀರಾಂಪುರ ಮಹದೇವ್ ಸೇರಿದಂತೆ ಹಲವರು ಇದ್ದರು.