ಬೆಂಗಳೂರು: ಐತಿಹಾಸಿಕ ಹಿನ್ನೆಲೆ ಹೊಂದಿರುವ ಇಲ್ಲಿನ ಕಾಡು ಮಲ್ಲೇಶ್ವರ ದೇವಸ್ಥಾನ (Kadu Malleshwara Swamy Temple) ದಲ್ಲಿ ಶಿವರಾತ್ರಿಯ ಹಿನ್ನೆಲೆಯಲ್ಲಿ ವಿಶೇಷ ಪೂಜೆ ನಡೆಯುತ್ತಿವೆ. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಿರುವ ಭಕ್ತರು ಶಿವನ ದರ್ಶನ ಪಡೆಯುತ್ತಿದ್ದಾರೆ.
ಶಿವರಾತ್ರಿ ಹಬ್ಬದ (Maha Shivratri Festival) ಹಿನ್ನೆಲೆಯಲ್ಲಿ ಇಂದು ಶಿವನಿಗೆ ವಿಶೇಷ ಪೂಜೆ ಕೈಗೊಳ್ಳಲಾಗಿದೆ. ಇಂದು ಬೆಳಗ್ಗೆ 4ಕ್ಕೆ ರುದ್ರಾಭಿಷೇಕದೊಂದಿಗೆ ಶಿವನಿಗೆ ವಿಶೇಷ ಪೂಜೆ ಕೈಗೊಳ್ಳಳಾಗಿದೆ.
ರುದ್ರಾಭಿಷೇಕ, ರುದ್ರ ಪಾರಾಯಣ ನೆರವೇರುತ್ತಿದೆ. ಈ ಬಾರಿ ಶಿವ ಹಾಗೂ ದೇವಸ್ಥಾನವನ್ನು ವಿಶೇಷವಾಗಿ ಅಲಂಕರಿಸಲಾಗಿದೆ. 2 ಸಾವಿರ ಮುಸುಕಿನ ಜೋಳ, ಕಬ್ಬು ಹಾಗೂ 1.5 ಸಾವಿರ ಎಳನೀರಿನಿಂದ ಅಲಂಕಾರ ಮಾಡಲಾಗಿದೆ.
ಬೆಳಗ್ಗೆ 5.30ರ ವರೆಗೆ ಸೇವಾ ಚೀಟಿ ಪಡೆದಿರುವ 1,500 ಜನ ಕುಟುಂಬ ಸಮೇತರಾಗಿ ಭಾಗಿಯಾಗಿದ್ದು, ಬೆಳಗ್ಗೆ 5.30ರ ನಂತರ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಕೊಡಲಾಗಿದೆ. ಅಲ್ಲದೇ, ಬರೋಬ್ಬರಿ 60 ಸಾವಿರ ಭಕ್ತರಿಗೆ ಪ್ರಸಾದಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ, ಸಂಜೆ 6.30 ರಿಂದ ಬೆಳಗಿನ ಜಾವ 2.30ರ ವರೆಗೆ ಜಾಗರಣೆ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.