ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಗೀತಾ ದಂಪತಿ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.
ಮೇ 19 ಶಿವಣ್ಣ ದಂಪತಿಗೆ ತುಂಬಾ ವಿಶೇಷವಾದ ದಿನವಾಗಿದೆ. ಹೀಗಾಗಿ ದಂಪತಿಯು ಇಂದು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದು, ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
ಶಿವಣ್ಣನ ಜೀವನದಲ್ಲಿ ಗೀತಾ ಅವರು ಬಹಳ ಮಹತ್ವದ ಪಾತ್ರ ವಹಿಸಿದ್ದಾರೆ. ಶಿವಣ್ಣನಿಗೆ ಕ್ಯಾನ್ಸರ್ ಬಂದಾಗ ಜೊತೆಯಾಗಿ ನಿಂತು ದೈರ್ಯ ತುಂಬಿದ್ದರು. ಶಿವಣ್ಣ ಸಹ ಗೀತಾ ರಾಜಕೀಯಕ್ಕೆ ಎಂಟ್ರಿಕೊಟ್ಟಾಗ ಬೆಂಬಲಕ್ಕೆ ನಿಂತು ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದರು. ಆದರೆ, ಗೀತಾ ಅವರಿಗೆ ಗೆಲವು ದೊರೆಯಲಿಲ್ಲ. ಶಿವಣ್ಣ ದಂಪತಿಗೆ ಸೆಲೆಬ್ರಿಟಿಗಳು ಮತ್ತು ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಶುಭ ಕೋರುತ್ತಿದ್ದಾರೆ.