ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪತ್ನಿ ಗೀತಾ ಸಮೇತ ತಿರುಪತಿಗೆ ಭೇಟಿ ಕೊಟ್ಟು ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಶಿವರಾಜ್ ಕುಮಾರ್, ಕ್ಯಾನ್ಸರ್ ಚಿಕಿತ್ಸೆಗೆ ಅಮೆರಿಕಾಗೆ ಹೋಗೊಕು ಮುನ್ನ ತಿರುಪತಿಯಲ್ಲಿ ಮುಡಿಸೇವೆ ಕೊಟ್ಟಿದ್ದ ಶಿವಣ್ಣ, ಚಿಕಿತ್ಸೆ ಪಡೆದು ಚೇತರಿಕೆ ನಂತ್ರ ಮತ್ತೆ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.
ತಮ್ಮ ನೋವಿನ ಅನುಭವಗಳನ್ನು ಡಾಂಕ್ಯೂಮೆಂಟರಿ ಮೂಲಕ ಜನರಿಗೆ ತಲುಪಿಸಲು ಸಜ್ಜಾಗಿದ್ದಾರೆ. ಕ್ಯಾನ್ಸರ್ ಬಂದಾಗ ಅನುಭವಿಸಿದ ನೋವು, ಚಿಕಿತ್ಸಾ ಕ್ರಮಗಳ ಕುರಿತು ಈ ಡಾಕ್ಯುಮೆಂಟರಿ ಬೆಳಕು ಚೆಲ್ಲಲಿದೆ. ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವುದು ಈ ಡಾಕ್ಯುಮೆಂಟರಿ ಉದ್ದೇಶವಾಗಿದೆ. ಈ ಬಗ್ಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ.