ಶಿವಮೊಗ್ಗ : ಮದುವೆಯಾದ ಮರುದಿನವೇ ನವವಿವಾಹಿತ ಹೃದಯಾಘಾತದಿಂದ ಸಾವನ್ನಪ್ಪಿರುವ ದಾರುಣ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ರಮೇಶ್ (30) ಸಾವನ್ನಪ್ಪಿದ ಯುವಕ.
ಕಳೆದ ನವೆಂಬರ್ 30ರಂದು ಶಿವಮೊಗ್ಗದ ಕಲ್ಯಾಣ ಮಂದಿರದಲ್ಲಿ ರಮೇಶ್ ವಿವಾಹಯಾಗಿತ್ತು. ಆ ಬಳಿಕ ವಧುವಿನ ಮನೆಯ ತನಕ ನವವಿವಾಹಿತರ ಮೆರವಣಿಗೆ ನಡೆಸಲಾಗಿತ್ತು. ನಂತರ ವಧುವಿನ ಮನೆಯ ದೇವರ ಮನೆಯಲ್ಲಿ ಕೈ ಮುಗಿಯುವಾಗಲೇ ರಮೇಶ್ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ರವಾನೆ ಮಾಡುವಷ್ಟರಲ್ಲಿ ರಮೇಶ್ ಕೊನೆಯುಸಿರೆಳೆದಿದ್ದಾರೆ.
ರಮೇಶ್ ಸಾವಿನಿಂದ ಸದ್ಯ ನವವಧುವಿನ ಮನೆಯಲ್ಲಿ ಸೂತಕದ ವಾತಾವರಣ ಆವರಿಸಿದೆ. ರಮೇಶ್ ತನ್ನ ತಂದೆ ಮೃತರಾದ ಬಳಿಕ ಹನುಮಂತಪುರದಿಂದ ಶಿವಮೊಗ್ಗ ತಾಲೂಕು ಹೊಸಕೊಪ್ಪ ಗ್ರಾಮದಲ್ಲಿ ತನ್ನ ತಾಯಿಯೊಂದಿಗೆ ನೆಲೆಸಿದ್ದರು. ಅವರಿಗೆ ಓರ್ವ ಸಹೋದರ ಇದ್ದಾರೆ. ರಮೇಶ್ ಅಂತ್ಯಕ್ರಿಯೆ ಮಂಗಳವಾರ (ಡಿ.2) ಹೊಸಕೊಪ್ಪದಲ್ಲಿ ನೆರವೇರಿತು. ನವವಿವಾಹಿತನ ಅಕಾಲಿಕ ಸಾವಿನಿಂದ ಕುಟುಂಬಸ್ಥರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ : ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್ | ಜೀವಾವಧಿ ಶಿಕ್ಷೆ ಅಮಾನತು ಅರ್ಜಿ ವಜಾಗೊಳಿಸಿದ ಹೈಕೋರ್ಟ್!



















