ಶಿವಮೊಗ್ಗ : ನಗರ ದೇವತೆ, ಕೋಟೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ದೊರೆತಿದೆ. ಇಂದಿನಿಂದ ಫೆಬ್ರವರಿ 28ರವರೆಗೆ ಒಟ್ಟು ಐದು ದಿನ ಜಾತ್ರೆ ನಡೆಯಲಿದೆ. ಫೆಬ್ರವರಿ 28ರಂದು ದೇವಿಯನ್ನು ವನಕ್ಕೆ ಬಿಡುವ ಮೂಲಕ ಜಾತ್ರೆಗೆ ತೆರೆ ಬೀಳಲಿದೆ.
ಮಾರಿಕಾಂಬಾ ದೇವಾಲಯವನ್ನು ವಿವಿಧ ಹೂವು, ಹಣ್ಣು, ಬಳೆಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿದೆ. ವಿವಿಧ ಹೂವು, ಕಲ್ಲಂಗಡಿ, ಕಬ್ಬು, ಬಳೆ ಹಾಗು ವಿವಿಧ ವಿದ್ಯುತ್ ದೀಪಗಳಿಂದ ದೇಗುಲ ಕಂಗೊಳಿಸುತ್ತಿದೆ.

ಇಂದು ಗಾಂಧಿ ಬಜಾರ್ನ ತವರು ಮನೆಯಲ್ಲಿ ದೇವಿಗೆ ಪೂಜೆ ನಡೆಯಿತು. ಬ್ರಾಹ್ಮಣ ನಾಡಿಗರ ತವರು ಮನೆಯಿಂದ ಬಾಸಿಂಗ ತಂದು ಮದುವೆ ನೆರವೇರಿಸಲಾಯಿತು. ಮಾಂಗಲ್ಯ ಧಾರಣೆಯ ನಂತರ ದೇವಿಗೆ ಪೂಜೆ ನಡೆಯಿತು. ಬೆಳಗಿನ ಜಾವ 4 ಗಂಟೆಯಿಂದಲೇ ಮಹಿಳೆಯರು ಸರದಿ ಸಾಲಿನಲ್ಲಿ ನಿಂತು ದೇವಿಗೆ ಉಡಿ ತುಂಬಿದರು. ಗಾಂಧಿ ಬಜಾರ್ನಿಂದ ಸರದಿ ಸಾಲು ಬಿ.ಹೆಚ್.ರಸ್ತೆಯ ಸೈನ್ಸ್ ಮೈದಾನದವರೆಗೂ (ಸುಮಾರು 4 ಕಿ.ಮೀ) ಇತ್ತು. ಜನರಿಗಾಗಿ ಗಾಂಧಿ ಬಜಾರ್ನಲ್ಲಿ ಜರ್ಮನ್ ಟೆಂಟ್, ಬಿ.ಹೆಚ್.ರಸ್ತೆಯಲ್ಲಿ ಶಾಮಿಯಾನ ಹಾಕಲಾಗಿತ್ತು. ಮಾರ್ಚ್ 6ರಂದು ಮಾರಿಕಾಂಬ ದೇವಾಲಯ ಸಮಿತಿ ವತಿಯಿಂದ ಬಯಲು ಕುಸ್ತಿ ಸ್ಪರ್ಧೆ ಏರ್ಪಡಿಸಲಾಗಿದೆ.
ಇದನ್ನೂ ಓದಿ : ಸ್ಟಾಕ್ ಮಾರ್ಕೆಟ್ನಲ್ಲಿ ಹೂಡಿಕೆ ಹೆಸರಲ್ಲಿ ವಂಚಿಸುತ್ತಿದ್ದ ಇಬ್ಬರ ಬಂಧನ!



















