ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಬೆಜ್ಜವಳ್ಳಿಯ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಇರುಮುಡಿ ಹೊತ್ತು ಶಿವಣ್ಣ ದಂಪತಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕರ್ನಾಟಕದ ಶಬರಿಮಲೆ ಎಂದು ಖ್ಯಾತಿಯಾದ ಬೆಜ್ಜವಳ್ಳಿ ಕೇತ್ರದಲ್ಲಿ ಶಿವರಾಜ್ಕುಮಾರ್ ಮಾತನಾಡಿ, ಯಾವಾಗಲೂ ಶಬರಿಮಲೆಗೆ ನಾನು ಇರುಮುಡಿ ಕಟ್ಟುತ್ತಿದ್ದೆ. ಈ ಬಾರಿ ಬೆಜ್ಜವಳ್ಳಿಯ ಅಯ್ಯಪ್ಪಸ್ವಾಮಿಗೆ ಇರುಮುಡಿ ಕಟ್ಟಿದ್ದೇನೆ. ಶಬರಿಮಲೆಯಷ್ಷೇ ಇಲ್ಲೂ ಕೂಡ ಅದೇ ಅನುಭವ ಸಿಕ್ಕಿದೆ. ನಮ್ಮ ಊರಿನಲ್ಲಿ ಪೂಜೆ ಸಲ್ಲಿಸಿದಕ್ಕೆ ಖುಷಿ ಆಗುತ್ತಿದೆ. ಇಲ್ಲಿಯೂ ಗರುಡ ದರ್ಶನ ಆಗಿದೆ ಎಂದಿದ್ದಾರೆ.
ಇದನ್ನೂ ಓದಿ : ಬ್ರಾಡ್ ವಿಷನ್ ವರ್ಲ್ಡ್ ಸ್ಕೂಲ್ನಲ್ಲಿ ಆರ್ಮಿ ದಿವಸ್-ಫೌಂಡರ್ ಡೇ ಅದ್ದೂರಿ ಆಚರಣೆ!



















