ಬೆಂಗಳೂರು: ಬಿಗ್ ಬಾಸ್ ಕನ್ನಡ 7’ರ ಸ್ಪರ್ಧಿ ಶೈನ್ ಶೆಟ್ಟಿ ನಟನಾಗಿ ಮಾತ್ರವಲ್ಲ ಹೋಟೆಲ್ ಉದ್ಯಮ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡವರು. ಆದರೆ, ಈಗ ತಮ್ಮ ಜೀವನಕ್ಕೆ ಆಧಾರವಾಗಿದ್ದ ಉದ್ಯಮ ಕೈ ಬಿಟ್ಟಿದ್ದಾರೆ ಎನ್ನಲಾಗಿದೆ.
ಅವರು ತಮ್ಮ ಜೀವನದ ಪ್ರಮುಖ ಘಟ್ಟಕ್ಕೆ ವಿದಾಯ ಹೇಳಿದ್ದಾರೆ. ಶೈನ್ ಶೆಟ್ಟಿ ಬಿಗ್ ಬಾಸ್ ನಲ್ಲಿ ವಿಜೇತರಾದ ನಂತರ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟರು. ಅದಾದ ಬಳಿಕ ಫುಲ್ ಬಿಜಿಯಾಗಿದ್ದ ಶೈನ್ ಶೆಟ್ಟಿ, ನಂತರ ಗಲ್ಲಿ ಕಿಚನ್ ಎನ್ನುವಂತಹ ರೆಸ್ಟೋರೆಂಟ್ ಓಪನ್ ಮಾಡಿದ್ದರು. ಇದೀಗ ಬದುಕು ಕೊಟ್ಟ ಗಲ್ಲಿ ಕಿಚನ್ ಗೆ ವಿದಾಯ ಹೇಳಿದ್ದಾರೆ. ಶೈನ್ ಶೆಟ್ಟಿ.ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ, ಜೀವನದ ಕೆಲವೊಂದು ಪ್ರಯಾಣ ನಮ್ಮ ಅಸ್ತಿತ್ವವನ್ನು ತೋರಿಸಿ ನಮ್ಮ ವ್ಯಕ್ತಿತ್ವವನ್ನು ಎತ್ತಿ ಹಿಡಿಯುತ್ತದೆ. ನನ್ನ ಲೈಫ್ ನಲ್ಲಿ ಅದು ಗಲ್ಲಿ ಕಿಚನ್ ಆಗಿದೆ.
ಜೀವನ ಸಾಗಿಸುವುದಕ್ಕಾಗಿ ಅಂತ ಶುರು ಮಾಡಿದ ಒಂದು ಪುಟ್ಟ ದೋಸೆ ಕ್ಯಾಂಪ್ ಅದು. ನೀವೆಲ್ಲ ಇಷ್ಟಪಟ್ಟು ಕೊಂಡಾಡಿ ಎರಡು ಬ್ರಾಂಚ್‌ಗಳ ಹೋಟೆಲ್ ಮಟ್ಟಕ್ಕೆ ಪ್ರೀತಿಯಿಂದ ಬೆಳೆಸಿದಿರಿ. ಆ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರಋಣಿ ಎಂದು ಶೈನ್ ಪತ್ರ ಬರೆದಿದ್ದಾರೆ. ಜೀವನದಲ್ಲಿ ದಿಕ್ಕು ಮತ್ತು ಗುರಿ ಬದಲಾದಾಗ ಅದಕ್ಕೆ ಹೊಂದಿಕೊಂಡು ಹೋಗುವುದು ಅನಿವಾರ್ಯ. ಗಲ್ಲಿ ಕಿಚನ್ ನ್ನು ನನ್ನಂತೆ ಆಸಕ್ತಿ ಇರುವ ಯುವ ಪ್ರತಿಭೆಗೆ ಹಸ್ತಾಂತರ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನು ಕೇಳಿ ಹಲವು ಅಭಿಮಾನಿಗಳು ನಿರಾಸೆ ವ್ಯಕ್ತಪಡಿಸಿದ್ದಾರೆ.