ಗದಗ: ನಿಗೂಢ ಕಾಯಿಲೆಗೆ ಕುರಿಗಳು (Sheep) ಬಲಿಯಾಗಿರುವ ಘಟನೆ ನಡೆದಿದೆ. ಕುರಿಗಳು ಏಕಾಏಕಿ ವಿಲವಿಲ ಎಂದು ಒದ್ದಾಡಿ ಸಾವನ್ನಪ್ಪಿವೆ. ಇದನ್ನು ಕಂಡು ಕುರಿಗಾಹಿಗಳು ಕಂಗಾಲಾಗುತ್ತಿದ್ದಾರೆ. ಅರ್ಧ ಗಂಟೆಯಲ್ಲಿ 20 ಕ್ಕೂ ಹೆಚ್ಚು ಕುರಿಗಳ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೆರಳ್ಳಿ ತಾಂಡಾದಲ್ಲಿ ನಡೆದಿದೆ. ಅಂಥ್ರಾಕ್ಸ್ ಸೋಂಕು ಶಂಕೆ ವ್ಯಕ್ತವಾಗಿದೆ.
60 ಕುರಿಗಳಿರುವ ಹಿಂಡಿನಲ್ಲಿ ನೋಡು ನೋಡುತ್ತಿದ್ದ 20 ಕುರಿಗಳ ಸಾವನ್ನಪ್ಪಿವೆ. ಪೋಮಪ್ಪ ಲಮಾಣಿ ಎಂಬುವರಿಗೆ ಸೇರಿದ ಕುರಿಗಳು ಸರಣಿ ಎಂಬಂತೆ ಸಾವನ್ನಪ್ಪಿವೆ. ಕುರಿಗಳ ಸಾವು ಕಣ್ಣಾರೆ ಕಂಡು ಕುರಿಗಾಹಿಗಳು ಕಂಗಾಗಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಅಂಥ್ರಾಕ್ಸ್ ಸೋಂಕು ಶಂಕೆ ವ್ಯಕ್ತಪಡಿಸಿದ್ದಾರೆ. ಕುರಿಗಳ ಮೂಗಲ್ಲಿ ರಕ್ತ ಸ್ರಾವವಾಗಿ ಸಾಯುತ್ತಿವೆ ಎಂದು ವೈದ್ಯರು ಹೇಳಿದ್ದಾರೆ.
ಅಂಥ್ರಾಕ್ಸ್ ಸೋಂಕು ಅಂದರೇನು?
ಇದು ಬ್ಯಾಸಿಲಸ್ ಅಂಥಾಸಿಸ್ (Bacillus anthracis) ಎಂಬ ಬ್ಯಾಕ್ಟಿರಿಯಾ ಮೂಲಕ ಹರಡುವಂತಹ ರೋಗ. ಗಾಳಿ ಮೂಲಕ ಈ ಸೋಂಕು ಹೆಚ್ಚಾಗಿ ಹರಡುತ್ತದೆ. ದನ, ಕುದುರೆ ಮತ್ತು ಕುರಿಗಳಲ್ಲಿ ಈ ಅಂಥ್ರಾಕ್ಸ್ ರೋಗ ಕಾಣಿಸಿಕೊಳ್ಳುತ್ತದೆ.