ಶಿರಾಳಕೊಪ್ಪಕ್ಕೆ ಶರಾವತಿ ನದಿ ನೀರು ಶೀಘ್ರವೇ ಲಭ್ಯವಾಗಲಿದೆ ಎಂದು ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಶಾಸಕ ವಿಜಯೇಂದ್ರ ಯಡಿಯೂರಪ್ಪ ಹೇಳಿದ್ದಾರೆ.
ಶಿರಾಳಕೊಪ್ಪದಲ್ಲಿ ಮಾತನಾಡಿದ ಅವರು, ಅಮೃತ ಯೋಜನೆಯಡಿ ಶರಾವತಿ ನದಿ ನೀರನ್ನು ಬಹುಗ್ರಾಮಕ್ಕೆ ಒದಗಿಸುವ ಯೋಜನೆ ಜಾರಿಗೊಂಡಿದ್ದು ಅದರ ಅಡಿಯಲ್ಲಿ ಪಟ್ಟಣಕ್ಕೆ ಉತ್ತಮ ಗುಣಮಟ್ಟದನ ಕುಡಿಯುವ ನೀರು ಸರಬರಾಜು ಆಗಲಿದೆ. ಈಗಾಗಲೇ ಅಂಜನಾಪುರ ಜಲಾಶಯದ ನೀರನ್ನು ಒದಗಿಸಲಾಗುತ್ತಿದೆ. ಸುತ್ತಲಿನ ಗ್ರಾಮಗಳಿಗೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗುತ್ತಿದ್ದು, ಶರಾವತಿ ನದಿ ನೀರು ನೀಡುವುದಕ್ಕೆ ಆರಂಭಿಸಿದರೆ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ ಎಂದು ಹೇಳಿದ್ದಾರೆ.
ಸೊರಬ ತಾಲೂಕಿನ ಶಿಗ್ಗ ಗ್ರಾಮದ ಸಮೀಪ ಶರಾವತಿ ನದಿಯಿಂದ ಪಂಪ್ ಮಾಡಿದ ನೀರು ಲಭ್ಯವಾಗುತ್ತಿದೆ. ಅಲ್ಲಿಂದ ಪೈಪ್‌ಲೈನ್ ಮೂಲಕ ಟ್ಯಾಂಕ್ ಗಳಿಗೆ ನೀರು ತುಂಬಿಸಿ ಜನರಿಗೆ ಒದಗಿಸಲಾಗುವುದು. ಯೋಜನೆ ಒಂದು ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದವರು ತಿಳಿಸಿದ್ದಾರೆ.