ಚಿಕ್ಕಮಗಳೂರು : ಡಾ. ಶರಣಬಸಪ್ಪ ಅಪ್ಪ ಲಿಂಗೈಕ್ಯರಾಗಿರುವ ಹಿನ್ನೆಲೆ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ. ವೀರ ಸೋಮೇಶ್ವರ ಜಗದ್ಗುರುಗಳು ಸಂತಾಪ ಸೂಚಿಸಿದ್ದಾರೆ.
ಶರಣಬಸಪ್ಪ ಅಪ್ಪ ಅವರು ಈ ನಾಡಿಗೆ ಅಮೂಲ್ಯವಾದ ಸೇವೆಯನ್ನು ನೀಡಿದ್ದಾರೆ. ದಾಸೋಹ, ಧಾರ್ಮಿಕ, ಸಾಮಾಜಿಕ, ಶಿಕ್ಷಣ ಕ್ಷೇತ್ರದಲ್ಲಿ ಶ್ರಮಿಸಿದ ಶ್ರೇಯಸ್ಸು ಅವರದ್ದು. 1992ರಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಶರಣಬಸಪ್ಪ ಅಪ್ಪ ಅವರ ಅಗಲಿಕೆಯಿಂದ ಈ ನಾಡಿಗೆ ತೀವ್ರ ನಷ್ಟವಾಗಿದ್ದು, ಅಗಲಿದ ಪವಿತ್ರವಾದ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ. ಸಂಸ್ಥಾನದ ಮತ್ತು ಅಭಿಮಾನಿಗಳಿಗೆ ದುಃಖ ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ಅನುಗ್ರಹಿಸಲಿ ಎಂದು ಸಂತಾಪ ಸಲ್ಲಿಸಿದ್ದಾರೆ.