ಮುಂಬೈ : 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಋತುವಿಗೆ ಮುಂಚಿತವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಆಸ್ಟ್ರೇಲಿಯಾದ ದಿಗ್ಗಜ ಶೇನ್ ವ್ಯಾಟ್ಸನ್ ಅವರನ್ನು ತಮ್ಮ ಹೊಸ ಸಹಾಯಕ ಕೋಚ್ ಆಗಿ ನೇಮಿಸುವ ಮೂಲಕ ತಮ್ಮ ಕೋಚಿಂಗ್ ಬಳಗವನ್ನು ಇನ್ನಷ್ಟು ಬಲಪಡಿಸಿದೆ.
ಐಪಿಎಲ್ ಜೊತೆಗಿನ ವ್ಯಾಟ್ಸನ್ ಅವರ ಸಂಬಂಧವು ಉದ್ಘಾಟನಾ ಋತುವಿನಿಂದಲೇ ಆರಂಭವಾಗಿದೆ. 2008ರಲ್ಲಿ, ಅವರು ಲೀಗ್‌ನ ಆರಂಭಿಕ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದರು. ರಾಜಸ್ಥಾನ ರಾಯಲ್ಸ್ ತಂಡದೊಂದಿಗಿನ ಅವರ ಅತ್ಯುತ್ತಮ ಆಲ್‌ರೌಂಡ್ ಪ್ರದರ್ಶನಕ್ಕಾಗಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನು ಗೆದ್ದರು, ನಂತರ ಅವರು ಟ್ರೋಫಿಯನ್ನು ಎತ್ತಿಹಿಡಿದರು. ಆ ಬಳಿಕ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಸೇರಿದಂತೆ ಅನೇಕ ಫ್ರಾಂಚೈಸಿಗಳನ್ನು ಪ್ರತಿನಿಧಿಸಿದರು ಮತ್ತು ಹಲವಾರು ಸ್ಮರಣೀಯ ಅಭಿಯಾನಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿಯೂ, ವ್ಯಾಟ್ಸನ್ ಆಸ್ಟ್ರೇಲಿಯಾ ಪರ ಎಲ್ಲಾ ಸ್ವರೂಪಗಳಲ್ಲಿ ವಿಶಿಷ್ಟ ವೃತ್ತಿಜೀವನವನ್ನು ರೂಪಿಸಿದ್ದರು. ಅಗ್ರ ಕ್ರಮಾಂಕದ ಬ್ಯಾಟರ್, ಸೀಮ್-ಬೌಲಿಂಗ್ ಆಯ್ಕೆ ಹೀಗೆ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದರು. 2009 ರಲ್ಲಿ ಆಸ್ಟ್ರೇಲಿಯಾದ ಚಾಂಪಿಯನ್ಸ್ ಟ್ರೋಫಿ ಗೆಲುವಿಗೆ ಅವರು ಪ್ರಮುಖ ಕೊಡುಗೆ ನೀಡಿದ್ದರು. ಮತ್ತು 2007 ಮತ್ತು 2015 ರ ವಿಶ್ವಕಪ್ ವಿಜೇತ ತಂಡಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇದನ್ನೂ ಓದಿ : ‘ಹಳ್ಳಿ ಪವರ್’ ಹೊಸ ಗೂಗ್ಲಿ | ಇನ್ಮುಂದೆ ಬದಲಾದ ಸಮಯದಲ್ಲಿ.. ಎಕ್ಸ್ಟ್ರಾ ಪವರ್‌ನೊಂದಿಗೆ ಎಕ್ಸ್ಟ್ರಾ ಮನರಂಜನೆ!



















