ಇತ್ತೀಚೆಗಷ್ಟೇ ರೈತರೊಬ್ಬರನ್ನು ಜಿಟಿ ಮಾಲ್ ಒಳಗೆ ಬಿಡದೆ ಅವಮಾನ ಮಾಡಿದ್ದ ಸುದ್ದಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈಗ ಫುಡ್ ಡೆಲಿವರಿ ಬಾಯ್ ಗೆ ಲಿಫ್ಟ್ ಉಪಯೋಗಿಸಬಾರದು ಎಂದು ಹೇಳಿ ಮಂತ್ರಿ ಮಾಲ್ ಸಿಬ್ಬಂದಿ ಅವಮಾನ ಮಾಡಿರುವ ಘಟನೆ ನಡೆದಿದೆ.
ಫುಡ್ ಡೆಲಿವರಿ ಬಾಯ್‌ಗಾದ ಈ ಅಪಮಾನಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಬೆಂಗಳೂರಿನ ಮಂತ್ರಿ ಮಾಲ್ ನಲ್ಲಿ ಡೆಲಿವರಿ ಬಾಯ್ ಒಬ್ಬರಿಗೆ ಅಪಮಾನ ಮಾಡಲಾಗಿದೆ. ಈ ಕುರಿತು ವಿಡಿಯೋವೊಂದು ವೈರಲ್ ಆಗಿದೆ.
ಇದೆಂಥ ಅಸ್ಪೃಶ್ಯತೆ? ಅಂದು ಪಂಚೆ ತೊಟ್ಟು ಬಂದ ರೈತನನ್ನು ಒಳ ಬಿಡದೇ ಅವಮಾನ ಮಾಡಿದ ಪ್ರಕರಣ ಮಾಸುವ ಮುನ್ನವೇ, ಇಂದು ಡೆಲಿವರಿ ಹುಡುಗರಿಗೆ ಮಂತ್ರಿಮಾಲ್ ಅಪಮಾನ ಮಾಡಿದೆ” ಎಂಬ ಶೀರ್ಷಿಕೆಯನ್ನು ಅದರಲ್ಲಿ ಬರೆಯಲಾಗಿದೆ.
ಅಲ್ಲಿದ್ದ ಇಬ್ಬರು ವ್ಯಕ್ತಿಗಳು ಕೂಡ ಲಿಫ್ಟ್ ಒಳಗೆ ಬಿಡಬೇಕು, ಯಾಕೆ ಮಾನವ ಹಕ್ಕು ಉಲ್ಲಂಘನೆ ಮಾಡ್ತಿರಾ ಎಂದು ಡೆಲಿವರಿ ಬಾಯ್ ಪರ ಮಾತನಾಡಿದ್ದಾರೆ. ಆದರೂ ಸಿಬ್ಬಂದಿ ಒಳಗಡೆ ಬಿಟ್ಟಿಲ್ಲ ಎನ್ನಲಾಗಿದೆ.