ಬೆಂಗಳೂರು: ಕೆ.ಆರ್. ಪುರಂ BMTC ನಿಲ್ದಾಣನಲ್ಲಿ ಶಕ್ತಿ ಯೋಜನೆ ಸಂಬಂಧಿಸಿ ತಮಿಳುನಾಡು ಮೂಲದ ವೃದ್ಧೆ, ಕಳೆದ ಕೆಲ ತಿಂಗಳಿಂದ ಮಗಳ ಆಧಾರ್ ಕಾರ್ಡ್ ಹಿಡಿದು ಉಚಿತ ಓಡಾಟ ಮಾಡುವ ಮೂಲಕ ಯೋಜನೆ ದುರ್ಬಳಕೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಈ ಬಾರಿಯೂ ಮಗಳ ಆಧಾರ್ ಕಾರ್ಡ್ ಬಳಸಿ ಟಿಕೆಟ್ ಪಡೆಯಲು ಮುಂದಾಗಿದ್ದಾಗ ಕಂಡೆಕ್ಟರ್ ಕೈಗೆ ಸಿಕ್ಕಿಬಿದ್ದಿದ್ದಾಳೆ. ವೃದ್ಧೆ ನಿರ್ವಾಹಕನಿಗೆ “ನನ್ನ ಕಾರ್ಡ್ ಇಲ್ಲ, ಬೇರೆ ರಾಜ್ಯದಲ್ಲಿದೆ” ಎಂದು ಹೇಳಿ, ಮಗಳ ಕಾರ್ಡ್‌ನಲ್ಲಿ ಉಚಿತ ಓಡಾಟ ಮಾಡವುದನ್ನು ಒಪ್ಪಿಕೊಂಡಿದ್ದಾರೆ.
ಈ ವೇಳೆ BMTC ನಿರ್ವಾಹಕ ವಿಡಿಯೋ ಸೆರೆ ಮಾಡಿ ವೈರಲ್ ಮಾಡಿದ್ದು, ವೃದ್ಧೆ ಮಗಳ ಆಧಾರ್ ಕಾರ್ಡ್‌ನಲ್ಲಿ ಓಡಾಟ ಮಾಡ್ತೀನಿ, ಏನಿವಾಗ? ಎಂದು ಗರ್ವದಿಂದ ಮಾತನಾಡಿದ್ದಾರೆ. ಈ ಘಟನೆ ಶಕ್ತಿ ಯೋಜನೆಯ ದುರ್ಬಳಕೆಯ ಕುರಿತು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಗಮನ ಸೆಳೆದಿದೆ.
ಇದನ್ನೂ ಓದಿ : ಬೆಣ್ಣೆಯಲ್ಲೂ ಕಲಬೆರಕೆ..? ಆಹಾರ ಸುರಕ್ಷತಾ ಅಧಿಕಾರಿಗಳಿಂದ ಅಂಗಡಿಗಳ ಮೇಲೆ ದಾಳಿ



















