ಬಾಲಿವುಡ್ ನ ಸ್ಟಾರ್ ನಟ ಶಾರುಖ್ ಖಾನ್ ಪುತ್ರ ತಂದೆಯ ಹಾದಿ ಹಿಡಿಯಲು ಮುಂದಾಗಿದ್ದಾರೆ.
ಸುಹಾನಾ ಖಾನ್ ಈಗಾಗಲೇ ‘ಆರ್ಚಿಸ್’ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಆದರೆ, ಶಾರುಖ್ ಪುತ್ರ ಆರ್ಯನ್ ಖಾನ್ ಅಪ್ಪನಿಗಿಂತ ಭಿನ್ನ ಹಾದಿ ತುಳಿದಿದ್ದಾರೆ. ಆರ್ಯನ್ ಖಾನ್ ತಂದೆಯಂತೆ ಚಿತ್ರರಂಗದ ಮೂಲಕ ಎಂಟ್ರಿ ಕೊಡದೆ, ವೆಬ್ ಸರಣಿ ಮೂಲಕ ಬರುತ್ತಿದ್ದಾರೆ. ಡಾಕ್ಯುಮೆಂಟರಿ ಮಾದರಿಯ ಈ ವೆಬ್ ಸರಣಿಯ ಬಿಡುಗಡೆಗೆ ದಿನಾಂಕ ಫಿಕ್ಸ್ ಮಾಡಲಾಗಿದೆ.
ಅಮೆರಿಕದಲ್ಲಿ ನಡೆದ ಇವೆಂಟ್ನಲ್ಲಿ ತಮ್ಮ ಮುಂದಿನ ವರ್ಷದ ಪ್ರಾಜೆಕ್ಟ್ಗಳನ್ನು ಘೋಷಣೆ ಮಾಡಿರುವ ನೆಟ್ಫ್ಲಿಕ್ಸ್, ಆರ್ಯನ್ ಖಾನ್ ಅವರ ವೆಬ್ ಸರಣಿಯ ಘೋಷಣೆಯನ್ನು ಅಧಿಕೃತವಾಗಿ ತಿಳಿಸಿದೆ. ಬಾಲಿವುಡ್ ಜೀವನದ ಬಗ್ಗೆ ವಿಶಿಷ್ಟವಾದ ವೆಬ್ ಸರಣಿಯನ್ನು ಆರ್ಯನ್ ಖಾನ್ ನಿರ್ದೇಶನ ಮಾಡಿದ್ದಾರೆ. ಈ ವೆಬ್ ಸರಣಿಗೆ ಆರ್ಯನ್ ತಾಯಿ ಗೌರಿ ಖಾನ್ ಬಂಡವಾಳ ಹೂಡಿದ್ದಾರೆ. ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಅಡಿಯಲ್ಲಿ ಈ ವೆಬ್ ಸರಣಿ ನಿರ್ಮಾಣಗೊಂಡಿದೆ. 2025 ರಲ್ಲಿ ವೆಬ್ ಸರಣಿ ಬಿಡುಗಡೆ ಆಗಲಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಶಾರುಖ್ ಖಾನ್, ‘ಈ ಹೊಸ ಸರಣಿಯನ್ನು ನೆಟ್ಫ್ಲಿಕ್ಸ್ ಜೊತೆಗೂಡಿ ಪ್ರಸ್ತುತಪಡಿಸಲು ನಾವು ಉತ್ಸುಕರಾಗಿದ್ದೇವೆ. ಸಿನಿಮಾ ಜಗತ್ತಿನ ಬಗ್ಗೆ ವಿಶಿಷ್ಟ ನೋಟವನ್ನು ಈ ವೆಬ್ ಸರಣಿ ಒಳಗೊಂಡಿದೆ. ಮನೊರಂಜನಾ ಕ್ಷೇತ್ರ ಹೊರಗಿನವರಿಗೆ ಹೇಗೆ ಕಾಣುತ್ತದೆ ಎಂಬುದನ್ನು ಈ ವೆಬ್ ಸರಣಿ ಮೂಲಕ ತೋರಿಸಲಾಗಿದೆ ಎಂದಿದ್ದಾರೆ.