ಮುಂಬಯಿ: ಬಾಲಿವುಡ್ ಕಿಂಗ್ ಶಾರೂಖ್ ಗೆ ದೇಶ ಅಷ್ಟೇ ಅಲ್ಲದೇ, ವಿದೇಶದಲ್ಲೂ ಫ್ಯಾನ್ಸ್ ಇದ್ದಾರೆ. ಈಗಲೂ ಅವರ ಚಿತ್ರ ಬಿಡುಗಡೆಯಾಗುತ್ತದೆ ಎಂದರೆ ಸಾಕು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಅವರ ಹಿಂದಿನ ಶ್ರಮ, ವೈಫಲ್ಯದ ಬಗ್ಗೆ ಈಗ ಚರ್ಚೆಯಾಗುತ್ತಿದ್ದು, ಸ್ವತಃ ಅವರೇ ಈ ಕುರಿತು ಹೇಳಿಕೊಂಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಶಾರೂಖ್ ಖಾನ್, ಜನರು ತಮ್ಮ ವೈಫಲ್ಯಗಳ ಮೇಲೆ ಕೇಂದ್ರೀಕರಿಸುವ ಬದಲು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದಿದ್ದಾರೆ. ವಿಫಲವಾದಾಗ ನಿಮ್ಮ ಕೆಲಸವು ತಪ್ಪಾಗಿದೆ ಎಂದು ನೀವು ನಂಬಬಾರದು. ನೀವು ಕೆಲಸ ಮಾಡುತ್ತಿದ್ದ ಪರಿಸರ ವ್ಯವಸ್ಥೆಯನ್ನು ನೀವು ತಪ್ಪಾಗಿ ಅರ್ಥೈಸಿಕೊಂಡಿರಬಹುದು. ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುವುದನ್ನು ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.
ನಾನು ನನ್ನ ಬಾತ್ರೂಮ್ನಲ್ಲಿ ಬಹಳಷ್ಟು ಅಳುತ್ತಿದ್ದೆ. ನಾನು ಅದನ್ನು ಯಾರಿಗೂ ತೋರಿಸಲಿಲ್ಲ. ಚಿತ್ರಗಳು ಜನರಿಗೆ ತಲುಪಲು ವಿಫಲವಾದರೆ ಕೆಟ್ಟದಾಗಿ ಮಾಡಿದ್ದೇನೆ ಎಂದು ಒಪ್ಪಿಕೊಳ್ಳಬೇಕು. ವೈಫಲ್ಯಗಳನ್ನು ಮೆಚ್ಚಿ ನಿಲ್ಲಬೇಕು. ಹತಾಶೆಯ ಕ್ಷಣಗಳು ಸಾಕಷ್ಟಿವೆ. ಅವುಗಳಿಗೆ ಮೌನವಾಗಿರಿ. ನಿಮಗೆ ಮಾತ್ರ ವಿಷಯಗಳು ತಪ್ಪಾಗುತ್ತಿವೆ ಎಂದು ನಂಬಬಾರದು ಎಂದು ಕಿವಿ ಮಾತು ಹೇಳಿದ್ದಾರೆ.