ಮಾನಂತವಾಡಿ: ಆಯುರ್ವೇದ ಮಸಾಜ್ ಗೆ ಬಂದ ವೇಳೆ ವಿದೇಶಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪವೊಂದು ಕೇಳಿ ಬಂದಿದೆ.
ವಯನಾಡಿನ ತಿರುನೆಲ್ಲಿಯಲ್ಲಿ ವಿದೇಶಿ ಮಹಿಳೆ (Foreign woman molested in Kerala)ಗೆ ರೆಸಾರ್ಟ್ ಉದ್ಯೋಗಿಯೊಬ್ಬ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಈ ಕುರಿತು ದೂರು ದಾಖಲಾಗಿದೆ.
ನೆದರ್ ಲ್ಯಾಂಡ್ ನ ಮಹಿಳೆಗೆ ಕಿರುಕುಳ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 25 ವರ್ಷದ ಯುವತಿ ಮೇಲೆ ಈ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ಆಯುರ್ವೇದ ಮಸಾಜ್ (Ayurveda Massage) ವೇಳೆ ಬಲವಂತವಾಗಿ ಸೆಕ್ಸ್ ಗೆ ಒತ್ತಾಯಿಸಿದ್ದಾರೆ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಯುವತಿ ಆರೋಪಿಸಿ ದೂರು ಸಲ್ಲಿಸಿದ್ದಾರೆ.
ಮಹಿಳೆಯು ಭಾರತ ಪ್ರವಾಸ ಮುಗಿಸಿ ನೆದರ್‌ಲ್ಯಾಂಡ್‌ಗೆ ಮರಳಿದ ನಂತರ ದೂರು ನೀಡಿದ್ದಾಳೆ. ಕೇರಳ ಎಡಿಜಿಪಿಗೆ ಜೂನ್ 14ರಂದು ಇ-ಮೇಲ್ ಮೂಲಕ ದೂರು ಲಭಿಸಿತ್ತು. ಭಾರತದಲ್ಲಿ ದೂರು ದಾಖಲಿಸುವ ವಿಧಾನ ತಿಳಿಯದ ಕಾರಣ ದೂರು ದಾಖಲಿಸಲು ವಿಳಂಬವಾಗಿರುವುದಾಗಿ ಮಹಿಳೆ ಆರೋಪಿಸಿದ್ದಾರೆ. ದೂರು ಸ್ವೀಕರಿಸಿ ವಾರ ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂಘಟನೆಗಳು ಆರೋಪಿಸಿವೆ.