ತುಮಕೂರು: ಅಪ್ರಾಪ್ತೆ ಮೇಲೆ ಮಲತಂದೆಯಿಂದಲೇ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಕೋರ್ಟ್ ಶಿಕ್ಷೆ ವಿಧಿಸಿದೆ.
ಎರಡನೇ ಮದುವೆಯಾಗಿದ್ದ ಆರೋಪಿ ಖಮೀಲ್ ಪಾಷ ಮಗಳ ಮೇಲೆ ನಿಂತರವಾಗಿ ದೌರ್ಜನ್ಯ ನಡೆಸುತ್ತಿದ್ದ. ವಿಷಯ ಯಾರಿಗಾದರೂ ತಿಳಿಸಿದರೆ ತಾಯಿಯನ್ನ ಕೊಲೆ ಮಾಡುವ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಈ ವಿಚಾರವಾಗಿ 2022ರ ಡಿಸೆಂಬರ್ 6 ರಂದು ತುಮಕೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿತ್ತು. ತುಮಕೂರು ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯದಿಂದ ಆರೋಪಿಗೆ ಶಿಕ್ಷೆ ಪ್ರಕಟವಾಗಿದ್ದು, ನೊಂದ ಬಾಲಕಿಗೆ 11 ಲಕ್ಷ ರೂ ಪರಿಹಾರ ಹಾಗೂ ಆರೋಪಿ ಖಮೀಲ್ ಪಾಷಗೆ 1.50ಲಕ್ಷ ರೂ ದಂಡ ಜೊತೆಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ. ಇನ್ನು ಬಾಲಕಿ ಪರ ವಿಶೇಷ ಸರ್ಕಾರಿ ಅಭಿಯೋಜಕಿ ಆಶಾ ಕೆ.ಎಸ್. ಅವರು ವಾದ ಮಂಡಿಸಿದ್ದರು.