ಕಠ್ಮಂಡು: ನೇಪಾಳದಲ್ಲಿ ವ್ಯಾಪಕ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ನಿರಂತರ ಮಳೆಯಿಂದಾಗಿ ಭೀಕರ ಪ್ರವಾಹ ಉಂಟಾಗಿ ಭೂಕುಸಿತ ಸಂಭವಿಸಿದೆ.
ಹೀಗಾಗಿ ನೇಪಾಳದಲ್ಲಿ ಕನಿಷ್ಠ 112 ಜನರು ಸಾವನ್ನಪ್ಪಿದ್ದಾರೆ (Death). ಅಲ್ಲದೇ, ಇನ್ನೂ 79 ಜನ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಅಪಾರ ಪ್ರಮಾಣದ ಆಸ್ತಿ ಹಾನಿಯಾಗಿದೆ.
ಭೂಕುಸಿತದಿಂದಾಗಿ ನಾಪತ್ತೆಯಾಗಿದ್ದ ಜನರಿಗಾಗಿ ಹುಡುಕಾಟ ನಡೆಯುತ್ತಿದೆ. ರಾಜಧಾನಿ ಕಠ್ಮಂಡು ಸೇರಿದಂತೆ ನೇಪಾಳದ ಹಲವೆಡೆ ಭಾರಿ ಮಳೆ, ಪ್ರವಾಹದಿಂದ ಇಡೀ ಊರುಗಳು ಜಲಾವೃತಗೊಂಡಿವೆ. ಸಾವಿರಾರು ಜನ ಮನೆಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ.
ನಿರಾಶ್ರಿತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ನೇಪಾಳ ಸರ್ಕಾರ ಸೂಚನೆ ನೀಡಿದೆ. 3 ಸಾವಿರಕ್ಕೂ ಅಧಿಕ ಭದ್ರತಾ ಸಿಬ್ಬಂದಿ ರಕ್ಷಣಾ ಕಾರ್ಯಗಳನ್ನು ಮಾಡಿ ಅನೇಕರನ್ನು ರಕ್ಷಿಸಿದ್ದಾರೆ. ನಿರಂತರ ಮಳೆಯಿಂದಾಗಿ 112 ಜನ ಸಾವನ್ನಪ್ಪಿದ್ದಾರೆ. ಅವರಲ್ಲಿ 34 ಜನ ಕಠ್ಮಂಡು ಕಣಿವೆಯಲ್ಲೇ ಸಾವನ್ನಪ್ಪಿದ್ದಾರೆ. ಕಠ್ಮಂಡುವಿನಲ್ಲಿ ಸುಮಾರು 226 ಮನೆಗಳು ಮುಳುಗಡೆಯಾಗಿವೆ.
ಪ್ರವಾಹದಲ್ಲಿ ಒಟ್ಟು 79 ಜನ ನಾಪತ್ತೆಯಾಗಿದ್ದಾರೆ. ಸಾವಿರಕ್ಕೂ ಅಧಿಕ ಜನರನ್ನು ರಕ್ಷಿಸಲಾಗಿದೆ. ಜೂನ್ ನಿಂದ ಸೆಪ್ಟೆಂಬರ್ ವರೆಗಿನ ಮಾನ್ಸೂನ್ ಮಳೆಯು ಹಿಮಾಲಯ ರಾಷ್ಟ್ರದಲ್ಲಿ ಮತ್ತು ದಕ್ಷಿಣ ಏಷ್ಯಾದಾದ್ಯಂತ ಪ್ರತಿ ವರ್ಷವೂ ವ್ಯಾಪಕ ಸಾವು ಮತ್ತು ವಿನಾಶ ತರುತ್ತದೆ. ಹೀಗಾಗಿ ಸಾವು-ನೋವುಗಳು ಸಂಭವಿಸುತ್ತಿರುತ್ತವೆ.