ಹುಬ್ಬಳ್ಳಿ : ಸಿಲಿಂಡರ್ ಕೊರತೆ ನಡುವೆ ಸರ್ವರ್ ಸಮಸ್ಯೆ ಎದುರಾಗಿದ್ದು, ಹುಬ್ಬಳ್ಳಿಯ ನೆಹರೂ ಮೈದಾನದ ಬಳಿ ಇರುವ ಭಾರತ್ ಗ್ಯಾಸ್ ಏಜೆನ್ಸಿ ಮುಂದೆ ಬೆಳಿಗ್ಗೆಯಿಂದಲೂ ಜನ ಕಾದು ಕಾದು ಕುಳಿತು ಸುಸ್ತಾಗಿದ್ದಾರೆ.
ಗೃಹ ಬಳಕೆ ಸಿಲಿಂಡರ್ ಬುಕ್ ಮಾಡಲು ಸರ್ವರ್ ಸಮಸ್ಯೆ ಎದುರಾದ ಕಾರಣ ಡೀಲರ್ ಅಂಗಡಿ ಮುಚ್ಚಿಕೊಂಡು ಹೋಗಿದ್ದಾರೆ. ಹಾಗಾಗಿ ಜನರು ಅಂಗಡಿಯ ಮುಂದೆ ಕುಳಿತು ಹೈರಾಣಾಗಿದ್ದಾರೆ ಎನ್ನಲಾಗಿದೆ. ಅಲ್ಲದೇ ಬುಕ್ ಮಾಡಿದ್ದರು ಡೆಲಿವರಿ ಕೊಡದೆ ಇರುವುದಕ್ಕೆ ಕೆಲ ಗ್ಯಾಸ್ ಏಜೆನ್ಸಿ ವಿರುದ್ದ ಕಿಡಿಕಾರಿದ್ದಾರೆ.
ಸರ್ವರ್ ನೆಪ ಮಾಡಿಕೊಂಡು ಅಂಗಡಿ ಬಂದ್ ಮಾಡಿದ್ದಾರೆ. ಕೆಲಸ ಬಿಟ್ಟು ಬೆಳಿಗ್ಗೆಯಿಂದಲೂ ಕಾಯುತ್ತಿದ್ದೇವೆ. ಕೂಡಲೇ ಅವ್ಯವಸ್ಥೆ ಸರಿಪಡಿಸುವಂತೆ ಎಂದು ಗ್ರಾಹಕರು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ : ಪ್ರೀಮಿಯಂ ಪೆಟ್ರೋಲ್ ಬೆಲೆ ಏರಿಕೆ, ಜೆಟ್ ಇಂಧನ ಹಾಗೂ ಎಲ್‌ಪಿಜಿ ದರದಲ್ಲೂ ಭಾರಿ ಹೆಚ್ಚಳ



















