ಬೆಂಗಳೂರು: ಹಾಸನ (Hassan) ಜಿಲ್ಲೆಯಲ್ಲಿ ಸರಣಿ ಹೃದಯಾಘಾತ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು ಜನರು ಬೆಚ್ಚಿ ಬಿದ್ದಿದ್ದಾರೆ. ಇದರಿಂದಾಗಿ ಎಚ್ಚೆತ್ತುಕೊಂಡಿರುವ ಸರ್ಕಾರ ಸಮಿತಿ ರಚನೆ ಮಾಡಿದೆ.
ಹಾಸನ ಜಿಲ್ಲೆಯಲ್ಲಿ 40 ದಿನಗಳ ಅಂತರದಲ್ಲಿ ಬರೋಬ್ಬರಿ 21 ಜನರು ಹೃದಯಘಾತಕ್ಕೆ ಬಲಿಯಾಗಿದ್ದಾರೆ. ಈ ಸರಣಿ ಸಾವು ರಾಜ್ಯದಲ್ಲಿ ಆತಂಕ ಸೃಷ್ಟಿಸಿದೆ. ಹೀಗಾಗಿ ರಾಜ್ಯ ಆರೋಗ್ಯ ಇಲಾಖೆ (Karnataka Health Department), ಜಯದೇವ ನಿರ್ದೇಶಕ ಡಾ.ರವಿಂದ್ರನಾಥ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದೆ. ಹೃದಯಾಘಾತದ ಬಗ್ಗೆ ವರದಿ ನೀಡುವಂತೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತಾ ಸಮಿತಿಗೆ ಸೂಚಿಸಿದೆ.
ಹಾಸನ ಜಿಲ್ಲೆಯಲ್ಲಿ 18ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ನಿಖರ ಮಾಹಿತಿ ಕಲೆ ಹಾಕಲು ಸಾಧ್ಯವಿಲ್ಲ. ಕೆಲ ಖಾಯಿಲೆಗಳ ಬಗ್ಗೆ ಮಾತ್ರ ನಮ್ಮ ಬಳಿ ರಿಪೋರ್ಟ್ ಇದೆ. ಮುಂದಿನ ದಿನಗಳಲ್ಲಿ ಪ್ರತಿ ಸಾವಿನ ಬಗ್ಗೆ ರಿಪೋರ್ಟ್ ಆಗಬೇಕಿದೆ. ಸಾವು ಹೆಚ್ಚಳ ಏಕಾಏಕಿ ಅಂತ ಹೇಳಲು ಸಾದ್ಯವಿಲ್ಲ, ನಮ್ಮ ಡೇಟಾ ಪ್ರಕಾರ ಇಲ್ಲ. 15 ದಿನಗಳ ಹಿಂದೆ ಪ್ರಿಮಿಲರಿ ಮಾಹಿತಿ ಪ್ರಕಾರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ವರದಿ ಮಾಡಲಾಗಿದೆ ಎಂದಿದ್ದಾರೆ.
18 ಸಾವು ಪ್ರಕರಣಗಳ ಪೈಕಿ 9 ಜನರು ಸಾವನ್ನಪ್ಪಿದ್ದವರು 55 ವರ್ಷ ಮೇಲ್ಪಟ್ಟವರು. ಅವರೆಲ್ಲ ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿದ್ದರು. 5 ಜನ 20 ಹರೆಯದವರು ಎಂದು ತಿಳಿದಿದೆ. 1 ಸಾವು ಹಾಸನದಲ್ಲಿ ಆಗಿದೆ. ಇನ್ನುಳಿದ 4 ಸಾವು ಬೆಂಗಳೂರಿನಲ್ಲಿ ಆಗಿದೆ. 4 ಜನ ಹಾಸನ ಮೂಲದವರಾಗಿದ್ದಾರೆ. ಟೈಪ್ 1 ಡಯಾಬಿಟಿಸ್ ಇತ್ತು, ಕ್ರಾನಿಲ್ ಡಿಸೀಸ್ ಇತ್ತು. ಬಹುಪಾಲು ಸಾವು ಮನೆಯಲ್ಲಿ ಸಂಭವಿಸಿದೆ. ಹೀಗಾಗಿ ಹಳೆ ಮೆಡಿಕಲ್ ರೆಕಾರ್ಡ್ ಪರೀಕ್ಷಿಸಬೇಕಿದೆ. 9 ಸಾವಿನ ಬಗ್ಗೆ ತಿಳಿಯಲು ಕಮಿಟಿ ರಚಿಸಲಾಗಿದೆ ಎಂದು ಹೇಳಿದ್ದಾರೆ.