ಹಾವೇರಿಯಲ್ಲಿ ಮಳೆಯಿಂದಾಗಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಹಲವೆಡೆ ವಿದ್ಯುತ್ ಕಂಬಗಳು ಹಾಗೂ ಬೃಹತ್ ಮರಗಳು ನೆಲಕಚ್ಚಿವೆ.
ನಗರದ ಶಿವಾಜಿ ಸರ್ಕಲ್ ನಲ್ಲಿ ವಿದ್ಯುತ್ ಕಂಬಗಳು ನೆಲ ಕಚ್ಚಿವೆ. ಹೀಗಾಗಿ ರಸ್ತೆ ಬದಿ ನಿಂತಿದ್ದ ಎರಡು ಸ್ಕೂಟರ್ ಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಅಶ್ವಿನಿ ನಗರದಲ್ಲಿ ತೆಂಗಿನ ಮರ ಉರುಳಿ ಬಿದ್ದಿದೆ. ಮನೆ ಮುಂದಿದ್ದ ವಿದ್ಯುತ್ ತಂತಿಯ ಮೇಲೆ ಮರ ಬಿದ್ದಿದೆ. ಎಂಎಂ ಸರ್ಕಲ್ ನಲ್ಲಿ ಬೃಹತ್ ಮರ ನೆಲಕಚ್ಚಿದೆ. ಕಾರುಗಳ ಮೇಲೆಯೇ ಮರ ಉರುಳಿ ಬಿದ್ದ ಪರಿಣಾಮ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಅಲ್ಲದೇ, ಹಲವೆಡೆ ವಿವಿಧ ರೀತಿಯಲ್ಲಿ ಅವಾಂತರಗಳು ಸೃಷ್ಟಿಯಾಗಿವೆ.