ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂಲ್ಲಿ BMTC ಇವಿ ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ಭೀಕರ ಸರಣಿ ಅಪಘಾತ ಸಂಭವಿಸಿದ್ದು, 9 ವಾಹನಗಳು ಜಖಂಗೊಂಡಿರುವ ಘಟನೆ ನಗರದ ಚಿನ್ನಸ್ವಾಮಿ ಸ್ಟೇಡಿಯಂ ಮುಂಭಾಗ ನಡೆದಿದೆ.
ಬೆಳಗ್ಗೆ 11:30ರ ಸುಮಾರಿಗೆ ಸಿಗ್ನಲ್‌ನಲ್ಲಿ ನಿಂತಿದ್ದ 4 ಕಾರು, 4 ಆಟೋ ಒಂದು ಬೈಕ್‌ಗೆ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ವಾಹನಗಳು ಸಂಪೂರ್ಣ ಜಖಂ ಆಗಿದ್ದು, ಅದೃಷ್ಟವಶಾತ್ ವಾಹನಗಳಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಮಾಹಿತಿಗಳ ಪ್ರಕಾರ ಬಿಎಂಟಿಸಿ ಚಾಲಕ ಕರ್ತವ್ಯದಲ್ಲಿದ್ದಾಗಲೇ ಆತನಿಗೆ ಫಿಡ್ಸ್ ಕಾಣಿಸಿಕೊಂಡ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಅಪಘಾತ ಬಳಿಕ ಡ್ಯಾಮೇಜ್ ಆದ ವಾಹನ ಸವಾರರು ಬೇಸರ ವ್ಯಕ್ತಪಡಿಸಿದ್ದು, ಗುತ್ತಿಗೆ ಆಧಾರದಲ್ಲಿ ಯರ‍್ಯಾರನ್ನೋ ಚಾಲಕರಾಗಿ ತೆಗೆದುಕೊಂಡಿರುವ ಕಾರಣ ಹೀಗೆಲ್ಲ ಆಗುತ್ತಿದೆ, ಜನ ಹೇಗೆ ನಂಬಿಕೆ ಇಟ್ಟು ಬಸ್ ಹತ್ತೋದು? ನಮ್ಮ ನಷ್ಟಕ್ಕೆ ಹೊಣೆ ಯಾರೆಂದು ಕಿಡಿಕಾರಿದ್ದಾರೆ.