ಇಳಕಲ್‌ನ ಸಿನಿಮಾ ತಂಡ ಹಾಗೂ ಬೆಂಗಳೂರಿನ ತಂತ್ರಜ್ಞರು ಸೇರಿ ತಯಾರಿಸಿರುವ “ಸೆರಗು” ಕಿರುಚಿತ್ರ ‘ಈಜಿಪ್ತಿಯನ್ ಅಮೆರಿಕನ್ ಫಿಲಂ ಫೆಸ್ಟಿವಲ್’ಗೆ ಆಯ್ಕೆಯಾಗಿದೆ. ಅದಲ್ಲದೆ, ಚೆನ್ನೈನ “ಸಿಟ್ಟಣ್ಣವಸಲ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್”ನಲ್ಲಿ ಬೆಸ್ಟ್ ಇಂಡಿಯನ್ ಶಾರ್ಟ್ ಫಿಲಂ ಪ್ರಶಸ್ತಿ ಪಡೆದುಕೊಂಡಿದೆ.
ಇದು ಇಳಕಲ್‌ನ ಬಡ ನೇಕಾರ ಯಮನಪ್ಪ ಹೆಂಡತಿ ಶಂಕ್ರವ್ವಳ ಕಥೆಯಾಗಿದ್ದು, ನೇಕಾರಿಕೆಯ ಆಗುಹೋಗುಗಳ ಬಗ್ಗೆ ಬೆಳಕು ಚೆಲ್ಲಿದೆ. “ಹಿರಣ್ಯ ನಾಗಲೋಟಿ ಡ್ರೀಮ್ ಮರ್ಚಂಟ್ಸ್” ಸಿನಿಮಾ ನಿರ್ಮಾಣ ಮಾಡಿದ್ದು, ರಚನೆ, ನಿರ್ದೇಶನ ಇಳಕಲ್‌ನ ಸಾಯಿನಾಗ್ ಮಾಡಿದ್ದಾರೆ. “ಸೆರಗು” ಕಿರುಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಕ್ಷತಾ ಕುಲಕರ್ಣಿ, ಸಂತು ಸೊಕನಾದಗಿ ನಟಿಸಿದಿದ್ದು, ಪೋಷಕ ನಟರಾಗಿ ಇಳಕಲ್‌ನ ಮಹಾಂತೇಶ್ ಗಜೇಂದ್ರಗಡ, ಉಮಾರಾಣಿ ಬಾರಿಗಿಡದ್, ಚಂದ್ರಶೇಖರಯ್ಯ ಶಾಸ್ತ್ರೀ, ಡಾ. ಮಹಾದೇವಿ ಮಾಳಿ, ಸುನಂದಾ ಕಂದಗಲ್, ಕಸ್ತೂರಿ ಮೆಹರ್ವಾಡೆ, ಪಲ್ಲವಿ ಗೊರಜನಾಳ ಹಾಗೂ ಚನ್ನಪ್ಪ ಬೂದುಗುಂಪಿ ಮಿಂಚಿದ್ದಾರೆ.
ಸಿನಿಮಾ ತಂಡ :
ಕ್ಯಾಮೆರಾ : ಮಿಲ್ಕಿ(ಮೇಯಿಯಪ್ಪ ಭಾಸ್ಕರ್), ಸಂಕಲನ : ಕ್ಯಾಟ್ ಬುಡ್ದು, ಕಲೆ : ಸ್ಮೋಕ್ ಸೂರಿ, ಧ್ವನಿಗ್ರಹಣ ಮತ್ತು ಎಸ್ಎಫ್ಎಕ್ಸ್ : ವಿಹಾನ್ ಅಭ್ಯುದಯ, ಮಿಕ್ಸಿಂಗ್ : ಗಿರೀಶ್ ಬಿ ಮ್, ವಿಎಫ್ಎಕ್ಸ್ : ಎಸ್. ಶರಣಬಸವ ಹಾಗೂ ಕೆ. ಯೇಸು, ಕಲರ್ : ಶ್ರೀಕರ್ ಎಸ್, ನಿರ್ದೇಶನ ತಂಡ : ಅಲ್ಲಮಪ್ರಭು ವಿ, ವಿನಯ್ ವಿ ಎಲ್, ವಿನಾಯಕ್ ವಿಂನ್ಸಿ ಹಾಗೂ ಸಂಗೀತ : ಗಾಜು ನಾಗರಾಳ್, ಪರುಶುರಾಮ ಹನುಮಂತ, ಸಂಗಪ್ಪ ಪಕೀರಪ್ಪ ಹೂಗಾರ್ ಜಾನಪದ ತಂಡಗಳು ನಿರ್ವಹಿಸಿದ್ದಾರೆ.
ಅದಲ್ಲದೆ, ಇಳಕಲ್‌ನ ಪ್ರತಿಷ್ಠಿತ ಸೀರೆ ವ್ಯಾಪಾರಸ್ಥರುಗಳಾದ ಪಿಕೆ ಗುಳೇದ ಮತ್ತು ಎಸ್ ಪಿ ಸರೋದೆಯವರು ಸಿನಿಮಾದ ಬ್ರಾಂಡ್ ಪಾರ್ಟನರ್ ಗಳಾಗಿದ್ದಾರೆ. ಇದರೊಂದಿಗೆ ಇಳಕಲ್‌ನ ಹೆಸರಾಂತ ಜೆ.ಬಿ ಆಸ್ಪತ್ರೆ ಹೆಲ್ತ್ ಪಾರ್ಟನರ್ ಆಗಿದ್ದು, ಕೊಪ್ಪಳದ ಶ್ರೀ ಸಾಯಿ ವಿನಾಯಕ್ ಎಂಟರ್ಪ್ರೈಯ್ಸ್, ಗಂಗಾವತಿಯ ಎಸ್ ಎಂ ಬ್ರಾಂಡ್ ಚಿಲ್ಲಿ ಪೌಡರ್ ಹಾಗೂ ಬೆಂಗಳೂರಿನ ಅಸ್ತಿತ್ವ ಇಂಜಿನಿರಿಂಗ್ ಸಂಸ್ಥೆಗಳು ಬ್ರಾಂಡ್ ಸ್ಪೋನ್ಸರ್ ಗಳಾಗಿವೆ. ಸದ್ಯ ಈ ಕಿರುಚಿತ್ರವು ಬಿಡುಗಡೆ ಹಂತದಲ್ಲಿದ್ದು, ಆದಷ್ಟು ಬೇಗ ನಿಮ್ಮನ್ನ ತಲುಪಲಿದೆ ಮತ್ತು ಮುಂದಿನ ಪೂರ್ಣ ಚಲನಚಿತ್ರಕ್ಕಾಗಿ ತಂಡ ನಿರ್ಮಾಣ ಸಂಸ್ಥೆಗಳ ನಿರೀಕ್ಷೆಯಲ್ಲಿರುವುದು ಖುಷಿಯ ಸಂಗತಿ.
ಇದನ್ನೂ ಓದಿ: ಮಗನಿಗೆ ‘ನೀರ್’ ಎಂದು ಹೆಸರಿಟ್ಟ ನಟಿ ಪರಿಣಿತಿ ಚೋಪ್ರಾ, ರಾಘವ್ ದಂಪತಿ | ಅರ್ಥ ಏನು ಗೊತ್ತಾ?



















