ಪುತ್ತೂರು : ಹಿರಿಯ ಪತ್ರಕರ್ತ ಸುಂದರ್ ಕಬಕ(56) ನಿಧನರಾಗಿದ್ದಾರೆ. ಅನಾರೋಗ್ಯ ಹಿನ್ನಲೆಯಲ್ಲಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಂದರ್ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ (ಶುಕ್ರವಾರ) ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಕಳೆದ 30 ವರ್ಷಗಳಿಂದ ಮಾದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಸುಂದರ್ ಅವರು ಈಟಿವಿ, ಜನಶ್ರೀ, ಉದಯ, ಏಷಿಯಾನೆಟ್ ಸುವರ್ಣ, ಸುಪ್ರಭಾತ ಮೊದಲಾದ ಮಾದ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಸುಂದರ್ ಅಂತ್ತಕ್ರಿಯೆ ಪುತ್ತೂರಿನ ಅವರ ಹುಟ್ಟೂರು ಕಬಕದಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಹಿರಿಯ ಪತ್ರಕರ್ತರ ನಿಧನಕ್ಕೆ ಪತ್ರಕರ್ತರ ಸಮೂಹ ಕಂಬನಿ ಮಿಡಿದಿದೆ.
ಇದನ್ನೂ ಓದಿ : ಬಿಕ್ಲು ಶಿವ ಕೊ*ಲೆ ಕೇಸ್ | ಶಾಸಕ ಬೈರತಿ ಬಸವರಾಜ್‌ಗೆ ನ್ಯಾಯಾಂಗ ಬಂಧನ



















